ಬಂಟ್ವಾಳ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಟಾಸ್ಕ್ಪೋರ್ಸ್ ಸಭೆಯು ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತೃತ್ವದಲ್ಲಿ ಎಸ್.ಜಿ.ಎಸ್.ವೈ ತರಬೇತಿ ಕೇಂದ್ರ ತಾಲೂಕು ಪಂಚಾಯತ್ ಕಚೇರಿಯಲ್ಲಿ ಆ.2ರಂದು ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ಅಭಿವೃದ್ಧಿ ಯಲ್ಲಿ ರಾಜಕೀಯ ಬೇಡ ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡೋಣ. ಅನುದಾನಗಳ ಪ್ರತಿ ಸದಸ್ಯ ನಿಗೆ ಸಮಾನವಾಗಿ ಹಂಚಿಕೆಯನ್ನು ಮಾಡುತ್ತೇನೆ. ಹಂಚಿಕೆಯಲ್ಲಿ ಯಾವುದೇ ತಾರತಮ್ಯವನ್ನು ಮಾಡುವುದಿಲ್ಲ, ಅನುದಾನದ ಹಂಚಿಕೆಯನ್ನು ಅಗತ್ಯತೆ ಮತ್ತು ಆದ್ಯತೆಯ ಮೇಲೆ ಸಮಾನಾಗಿ ಹಂಚಲು ಎಲ್ಲರ ಸಹಕಾರ ಬೇಕು.
ವಿಧಾನ ಸಭಾ ಕ್ಷೇತ್ರಕ್ಕೆ 7257000 ಸಾವಿರ ಹಣ ಮಂಜೂರಾತಿ ಅಗಿದ್ದು ರಸ್ತೆ ನಿರ್ವಹಣೆ ಯ ಬಗ್ಗೆ ಈಗಾಗಲೇ ಕ್ರಿಯಾಯೋಜನೆ ತಯಾರು ಮಾಡಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತುಂಗಪ್ಪ ಬಂಗೇರ, ಪದ್ಮಶೇಖರ್ ಜೈನ್, ಮಂಜುಳಾ ಮಾಧವ ಮಾವೆ, ಎಂ.ಎಸ್.ಮಹಮ್ಮದ್, ಮತ್ತು ತಾ.ಪಂ.ಸದಸ್ಯ ರುಗಳು ಹಾಗೂ ಅಧಿಕಾರಿ ಗಳು ಹಾಜರಿದ್ದರು.
ಈ ಸಂದರ್ಭದಲ್ಲಿ ತಾ.ಪಂ.ಅದ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅದ್ಯಕ್ಷೆ ಧನಲಕ್ಮೀ ಸಿ.ಬಂಗೇರ, ತಾ.ಪಂ.ಇಒ ರಾಜಣ್ಣ, ಅಧಿಕಾರಿ ನರೇಂದ್ರ ಬಾಬು ಉಪಸ್ಥಿತರಿದ್ದರು.


