ಬಂಟ್ವಾಳ: ಕೆ.ಎಸ್.ಆರ್.ಟಿ.ಸಿ.ಬಸ್ ಡಿಪೋ ಸಿಬ್ಬಂದಿಯ ದೂರಿನ ಪ್ರಕಾರ ಮಂಗಳೂರು ಎ.ಸಿ.ಬಿ.ಪೋಲಿಸರಿಂದ ಬಿ.ಸಿರೋಡು ಕೈಕಂಬ ದಲ್ಲಿರುವ ಕೆ.ಎಸ್.ಆರ್.ಟಿ.ಸಿ.ಡಿಪೋಗೆ ದಿಡೀರ್ ದಾಳಿ ನಡೆಸಲಾಯಿತು.
ಕೆ.ಎಸ್.ಆರ್.ಟಿ.ಸಿ.ಡಿಪೋಗಳಲ್ಲಿ ಹಣಕಾಸಿನ ಅವ್ಯವಹಾರ ಮತ್ತು ಲಂಚಾವತಾರ ತಾಂಡವಾಡುತ್ತಿದೆ ಎಂದು ಮೈಸೂರು ಘಟಕದ ಕೆ.ಎಸ್.ಅರ್.ಟಿ.ಸಿ.ಸಿಬ್ಬಂದಿ ಫಾರೂಕ್ ಖಾನ್ ಕೆ ಅವರು ಎ.ಸಿ.ಬಿ.ಗೆ ದೂರು ನೀಡಿದ್ದರು. ಆ.2ರಂದು ಬೆಳಗ್ಗೆ ಮಂಗಳೂರು ಮತ್ತು ಬಂಟ್ವಾಳ ಕೆ.ಎಸ್.ಆರ್.ಟಿ.ಸಿ.ಡಿಪೋಗೆ ದಾಳಿ ನಡೆಸಿ ಚಾಲಕ ಮತ್ತು ನಿರ್ವಾಹಕರನ್ನು ತನಿಖೆ ನಡೆಸಿ ನಗದು ಶಾಖೆಯಲ್ಲಿ ಹಣಕಾಸಿನ ಅವ್ಯವಹಾರ ಮತ್ತು ಲಂಚಾವತಾರ ದ ಬಗ್ಗೆ ದಾಖಲೆಗಳನ್ನು ಪರಿಶೀಲನೆ ನಡೆಸಿ ತನಿಖೆ ಯನ್ನು ಮುಂದುವರಿಸಿದ್ದಾರೆ.

ಎಡಿಜಿಪಿ, ಎಸಿಬಿ ನಿರ್ದೇಶನ ದಂತೆ ಪಶ್ಚಿಮ ವಲಯ ಎಸಿಬಿ ಎಸ್.ಪಿ.ಶ್ರತಿ ಡಿವೈಎಸ್ ಪಿ .ಸುದೀರ್ ಹೆಗ್ಡೆ ನೇತ್ರತ್ವದಲ್ಲಿ ಪೋಲೀಸ್ ಇನ್ಸ್ ಪೆಕ್ಟರ್ ಯೋಗೀಶ್ ಕುಮಾರ್ ಹಾಗೂ ಸಿಬ್ಬಂದಿ ಗಳು ಈ ಕಾರ್ಯಚರಣೆಯನ್ನು ನಡೆಸಿದ್ದಾರೆ.



