ಪಿಲಿಕುಳ ನಿಸರ್ಗಧಾಮದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ನಡೆದ 2 ದಿನಗಳ ಸಹಕಾರ ಭಾರತಿ ಮಂಗಳೂರು ವಿಭಾಗದ ಅಭ್ಯಾಸವರ್ಗದ ಸಮಾರಂಭ ನಡೆಯಿತು.

ಸಹಕಾರಿ ಸಂಸ್ಥೆಗಳು ಆಡಳಿತ ಮತ್ತು ಸಿಬ್ಬಂದಿ ವರ್ಗ ವೃತ್ತಿಪರತೆಯನ್ನು ಮೈಗೂಡಿಸಿಕೊಂಡು  ಕಾರ್ಯನಿರ್ವಹಿಸಬೇಕು. ಜೊತೆಗೆ ಖಾಸಗಿ ಮತ್ತು ಸಾರ್ವಜನಿಕ ರಂಗದ ಸ್ಪರ್ದಾತ್ಮಕತೆಯನ್ನು ಎದುರಿಸಿ ಮುಂದುವರೆಯಲು ಸಾಧ್ಯ ಎಂದು ದಿ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ  ಜಯರಾಜ್ ರೈ ಇವರು ಸಹಕಾರ ಭಾರತಿ ಮಂಗಳೂರು ವಿಭಾಗದ ಅಭ್ಯಾಸವರ್ಗವನ್ನು ಉದ್ಘಾಟಿಸಿ ಹೇಳಿದರು.

ಅಭ್ಯಾಸವರ್ಗದಲ್ಲಿ ಹರೀಶ್ ಅಚಾರ್ಯರವರು ‘ಸಹಕಾರ ಭಾರತಿಯ ಸೈದಾಂತಿಕ ಭೂಮಿಕೆ’ ಈ ಬಗ್ಗೆ ವಿಷಯ ಮಂಡಿಸಿದರು. ಸಹಕಾರಿಯ ಇತಿಹಾಸ ಮತ್ತು ಚಳುವಳಿಯ ಬಗ್ಗೆ ಎಸ್ ಆರ್ ಸತೀಶ್ಚಂದ್ರ ಇವರು, ಸಹಕಾರ ಭಾರತಿಯ ಸಂಘಟನಾ ಸಂರಚನೆ ಬಗ್ಗೆ ಸಂಜಯ್ ಪಾಚಪೂರ್‍ರವರು, ಗ್ರಾಮ ವಿಕಾಸದಲ್ಲಿ ಸಹಕಾರ ಸಂಘಗಳ ಪಾತ್ರದ ಬಗ್ಗೆ ನಾ.ಸೀತಾರಾಮ್, ಕಾರ್ಯಕರ್ತ ಮಾತು ಕಾರ್ಯಪದ್ಧತಿ ಬಗ್ಗೆ ಕೃಷ್ಣಪ್ರಸಾದ್ ವಿಷಯ ಮಂಡನೆ ಮಾಡಿದರು.

ಈ ಅಭ್ಯಾಸವರ್ಗದಲ್ಲಿ ವಿವಿಧ ಗೋಷ್ಠಿಗಳ ನಂತರ ಸಹಕಾರ ಸಂಘಗಳ ಸಮಸ್ಯೆಗಳ ಬಗ್ಗೆ ಅವಲೋಕನ ಮಾಡಲಾಯಿತು. ಸಹಕಾರ ಸಂಘಗಳಲ್ಲಿ ಬರುವಂತಹ ಸಮಸ್ಯೆಗಳನ್ನು ನಿವಾರಿಸಿ ಸಹಕಾರ ಕ್ಷೇತ್ರವನ್ನು ಬಲಿಷ್ಠಪಡಿಸುವ ಮೂಲಕ ರಾಷ್ಟ್ರದ ಅಭಿವೃದ್ಧಿಯಲ್ಲಿ ಸಮರ್ಪಕ ಪಾತ್ರವನ್ನು ಸಹಕಾರಿಗಳು ನಿರ್ವಹಿಸಬೇಕು ಎನ್ನುವ ನಿರ್ಣಯ ಕೈಗೊಳ್ಳಲಾಯಿತು. ಅಭ್ಯಾಸವರ್ಗದ ಸಮೂರೋಪದಲ್ಲಿ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಸಂಜಯ್ ಪಾಚಪೂರ್‍ರವರು ಮಾತನಾಡುತ್ತಾ ರಾಷ್ಟ್ರದ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರದ ಪಾಲುದಾರಿಕೆ ಅತೀ ಮಹತ್ವದ್ದಾಗಿದೆ, ದೇಶವನ್ನು ಪರಮವೈಭವಕ್ಕೇರಿಸುವ ನಿಟ್ಟಿನಲ್ಲಿ ಸಹಕಾರ ಕ್ಷೇತ್ರದ ಸೇನಾನಿಗಳಾಗಿ ನಾವೆಲ್ಲ ಕಾರ್ಯನಿರ್ವಹಿಸಬೇಕಾಗಿದೆ. ರಾಷ್ಟ್ರದ ಆಂತರಿಕ ಅರ್ಥ ವ್ಯವಸ್ಥೆಯನ್ನು ಬಲಪಡಿಸಿ ವಿವಿಧ ಕ್ಷೇತ್ರಗಳಲ್ಲಿ ಸಹಕಾರದ ಮೂಲಕ ತೊಡಗಿಸಿಕೊಂಡು ರಾಷ್ಟ್ರದ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳೋಣ ಎನ್ನುವ ಸಂದೇಶವನ್ನು ನೀಡಿದರು.

ಈ ಸಂದರ್ಭದಲ್ಲಿ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಸಂಜಯ್ ಪಾಚಪೂರ್, ರಾಜ್ಯ ಸಂಘಟನಾ ಪ್ರಮುಖ್ ಎಸ್ ಆರ್ ಸತೀಶ್ಚಂದ್ರ, ರಾಜ್ಯ ಸಹಸಂಘಟನಾ ಪ್ರಮುಖ್ ಹರೀಶ್ ಅಚಾರ್ಯ, ರಾಜ್ಯ ಉಪಾಧ್ಯಕ್ಷರಾದ ರವಿರಾಜ್ ಹೆಗ್ಡೆ, ರಾಜ್ಯ ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್, ಸ್ಕ್ಯಾಡ್ಸ್ ಅಧ್ಯಕ್ಷರಾದ ರವೀಂದ್ರ ಕಂಬಳಿ, ಹಾಪ್ ಕಾಮ್ಸ್ ಅಧ್ಯಕ್ಷರಾದ ಲಕ್ಷ್ಮಿನಾರಾಯಣ ಉಡುಪ, ಜನತಾ ಬಜಾರ್ ಅಧ್ಯಕ್ಷ ಉದಯ ಮುದೋಡಿ, ರಾಜ್ಯ ಮಹಿಳಾ ಪ್ರಮುಖ ಸುಮನಾ ಶರಣ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *