ಎಡಪದವು: ಎಡಪದವು ಪಟ್ಲಚ್ಚಿಲಿನ ದಿ. ಸುಂದರ ಪೂಜಾರಿಯವರ ಪುತ್ರ, ಶ್ರೀನಿವಾಸ ಪೂಜಾರಿ(42) ಬುಧವಾರ ಬೆಳಿಗ್ಗೆ ನಿಧನರಾದರು.

ಇವರು ವೃತ್ತಿಯಲ್ಲಿ ಟೈಲರ್ ಆಗಿದ್ದರು. ಕಳೆದ ಒಂದು ವರ್ಷದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ತಾಯಿ, ಪತ್ನಿ, ಮೂರು ವರ್ಷದ ಪುತ್ರಿ, ಮೂವರು ಸಹೋದರರು ಹಾಗೂ ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.
