ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ನಡೆದ ಛಾಯಾಗ್ರಾಹಕರ ಎಸೋಸಿಯೇಶನ್ ವತಿಯಿಂದ ಬಿ.ಸಿ.ರೋಡಿನಲ್ಲಿ ‘ಛಾಯಾಕ್ಷೇಮ ಚಾರಿಟೇಬಲ್ ಟ್ರಸ್ಟ್ ಸಂಸ್ಥೆ’ ಕಾರ್ಯಕ್ರಮವು ಸೋಮವಾರ ನಡೆಯಿತು. ಕಾರ್ಯಕ್ರಮವನ್ನು ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಉದ್ಘಾಟಿಸಿದರು.

Chchayakshema
ಸಮಾಜದಲ್ಲಿ ಸಂಭವಿಸಿದ ಸಿಹಿ ನೆನಪುಗಳನ್ನು ಮತ್ತೆ ಮತ್ತೆ ಜೀವನದ ಉದ್ದಕ್ಕೂ ನೆನಪಿನಲ್ಲಿ ಉಳಿಯುವಂತೆ ಮಾಡುವ ಛಾಯಾಗ್ರಾಹಕರ ವೃತ್ತಿ ಅಪೂರ್ವ ಮತ್ತು ಪುಣ್ಯದಾಯಕವಾಗಿದೆ. ಈ ವೃತ್ತಿಯಲ್ಲಿ ಕೂಡಾ ಹೊಸ ಅನ್ವೇಷಣೆ ಮತ್ತು ಹೊಸ ಸವಾಲು ಎದುರಿಸುವ ಮೂಲಕ ಆಧುನಿಕತೆಗೆ ತಕ್ಕಂತೆ ಬೆಳವಣಿಗೆಯಾಗುತ್ತಿದೆ. ಈ ಸಮಾಜಮುಖಿ ಸಂಘಟನೆಯ ವಿವಿಧ ಬೇಡಿಕೆಗಳಿಗೆ ಎಂದಿಗೂ ಸ್ಪಂದಿಸುವುದಾಗಿ ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಹೇಳಿದರು.
ಸಂಘದ ವಲಯಾಧ್ಯಕ್ಷ ಹರೀಶ್ ಮಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾತಾ ಬಿಲ್ಡರ್ಸ್ ಸಂಸ್ಥೆ ಮುಖ್ಯಸ್ಥ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ಸಂಘದ ಸದಸ್ಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿದರು.
ಸಂಘದ ವಲಯಾಧ್ಯಕ್ಷ ಹರೀಶ್ ಮಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಪಿಎಂಸಿ ಸದಸ್ಯ ಎಂ.ಪದ್ಮರಾಜ ಬಲ್ಲಾಳ್ ಮಾವಂತೂರು, ಅವಿಭಜಿತ ಸಂಘದ ಜಿಲ್ಲಾಧ್ಯಕ್ಷ ವಿಲ್ಸನ್ ಗೋನ್ಸಾಲ್ವಿಸ್, ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್, ಸಲಹಾ ಸಮಿತಿ ಸಂಚಾಲಕ ವಿಠಲ ಚೌಟ ಮತ್ತಿತರರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಮಾಜಿ ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ಕರುಣಾಕರ ಕಾನಂಗಿ, ಗೋಪಾಲ ಸುಳ್ಯ, ಶಿವರಾಮ ಕಡಬ, ಜಗನ್ನಾಥ ಶೆಟ್ಟಿ, ಛಾಯಾಕ್ಷೇಮ ಸಂಚಾಲಕ ಆನಂದ್ ಎನ್., ಕೋಶಾಧಿಕಾರಿ ಕುಮಾರಸ್ವಾಮಿ, ಕಾರ್ಯದರ್ಶಿ ಸುಕುಮಾರ್ ಬಂಟ್ವಾಳ, ಉಪಾಧ್ಯಕ್ಷರಾದ ಕಿಶೋರ್ ಬಿ.ಸಿ.ರೋಡ್, ರವಿಪ್ರಕಾಶ್, ಜೊತೆ ಕಾರ್ಯದರ್ಶಿಗಳಾದ ಹರೀಶ್ ಕುಂದರ್, ಕಿಶೋರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾದ ರಾಜೇಂದ್ರ ಕೆ., ರಾಜರತ್ನ, ನಿರ್ದೇಶಕರಾದ ಟಿ.ಹರೀಶ್ ರಾವ್, ಜಯಂತ ಕುಮಾರ್, ಎಂ.ಸತೀಶ್ ಕುಮಾರ್, ರೋಶನ್ ಕಲ್ಲಡ್ಕ, ಕೆ.ಗೋಪಾಲಕೃಷ್ಣ ಮತ್ತು ಬಾಲಕೃಷ್ಣ ಉಪಸ್ಥಿತರಿದ್ದರು.  ಕಾರ್ಯಕ್ರಮವನ್ನು ಹಿರಿಯ ಸದಸ್ಯ ಎಚ್ಕೆ ನಯನಾಡು ಕೋಶಾಧಿಕಾರಿ ಕುಮಾರಸ್ವಾಮಿ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *