ಬಂಟ್ವಾಳ: ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ವತಿಯಿಂದ ನಡೆದ ಪ್ರಾಂತ ಮಟ್ಟದ ಕಬಡ್ಡಿ ಮತ್ತು ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಹಿರಿಯ ಕಬಡ್ಡಿ ಆಟಗಾರ ವೆಂಕಟ್ರಮಣ ಬಳ್ಕೂರಾಯ ಜು.30 ಸೋಮವಾರದಂದು ಉದ್ಘಾಟಿಸಿದರು.

Kabaddi
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕೆ. ಪ್ರಭಾಕರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಶುಭ ಹಾರೈಸಿದರು.
ಈ ಪಂದ್ಯಾಟದಲ್ಲಿ ಒಟ್ಟು 18 ಜಿಲ್ಲೆಗಳಿಂದ ಒಟ್ಟು 30 ತಂಡಗಳು ಭಾಗವಹಿಸಿತ್ತು.

ಈ ಸಂದರ್ಭದಲ್ಲಿ ವಿದ್ಯಾಭಾರತಿ ಪ್ರಾಂತ ಕಾರ್ಯದರ್ಶಿ ವಸಂತ ಮಾಧವ, ಸಹಸಂಚಾಲಕ ರಮೇಶ ಎನ್., ವಿದ್ಯಾಭಾರತಿ ಪ್ರಾಂತ ನೈತಿಕ ಮತ್ತು ಅಧ್ಯಾತ್ಮಿಕ ವಿಷಯ ಪ್ರಮುಖ ವೆಂಕಟರಮಣ ರಾವ್ ಉಪಸ್ಥಿತರಿದ್ದರು. ಮನೋಜ್ ರೈ ಸ್ವಾಗತಿಸಿ, ಜಿನ್ನಪ್ಪ ಏಳ್ತಿಮಾರ್ ಕಾರ್ಯಕ್ರಮ ನಿರೂಪಿಸಿದರು. ಗೋಪಾಲ ಎಂ. ವಂದಿಸಿದರು.

By suddi9

Leave a Reply

Your email address will not be published. Required fields are marked *