ಬಂಟ್ವಾಳ: ತಾಲೂಕಿನಲ್ಲಿ ಗೆಳೆಯನ ಹುಟ್ಟು ಹಬ್ಬಕ್ಕೆಂದು ತೆರಳಿದ ಬಾಲಕನೋರ್ವ ನಾಪತ್ತೆಯಾಗಿದ್ದಾನೆ. ಘಟನೆ ಬಂಟ್ವಾಳ ದಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಕೆಳಗಿನ ಮಂಡಾಡಿ ನಿತ್ಯಾನಂದ ನಗರ ಗಣೇಶ್ ಕುಲಾಲ್ ಅವರ ಮಗ ಕಾರ್ತಿಕ್ (17) ಜುಲೈ 20 ರಂದು ನಾಪತ್ತೆಯಾಗಿದ್ದಾನೆ. ಗೆಳೆಯ ನ ಹುಟ್ಟು ಹಬ್ಬಕ್ಕೆ ಹೋಗಿ ಬರುತ್ತೇನೆ ಎಂದು ತಾಯಿಯಲ್ಲಿ ಹೇಳಿ ಮನೆಯಿಂದ ಹೋದವನು ವಾಪಾಸು ಮನೆಗೆ ಬರದೆ ನಾಪತ್ತೆಯಾಗಿದ್ದಾನೆ.
ಕಾರ್ತಿಕ್ ಕುರಿತು ಗೆಳೆಯನನ್ನು ವಿಚಾರಿಸಿದಾಗ ಅತನ ಮನೆಗೆ ಬಂದಿಲ್ಲ ಮತ್ತು ಬೇರೆ ಸಂಬಂಧಿಕರ ಮನೆಗೂ ಹೋಗಲಿಲ್ಲ ಎಂದು ಹೇಳಲಾಗುತ್ತಿದೆ. ಬಾಲಕ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.
ಈತನ ಬಗ್ಗೆ ಸುಳಿವು ಸಿಕ್ಕಿದ್ದಲ್ಲಿ ನಗರ ಠಾಣೆಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

