ಬೆಳ್ತಂಗಡಿ : ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಆಯ್ಕೆ ಪ್ರಕ್ರಿಯೆಯು ನಡೆಯಿತು.
ಕಾಲೇಜಿನ ಪ್ರಾಂಶುಪಾಲರ ಮಾರ್ಗದರ್ಶನದಂತೆ, ಉಪನ್ಯಾಸಕರ ಸಹಕಾರದೊಂದಿಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ 2018-19ನೇ ಸಾಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಲಿಖಿತ್ ಕುಮಾರ್ ಹಾಗೂ ಕಾರ್ಯದರ್ಶಿಯಾಗಿ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಹನಾ ಆಯ್ಕೆಯಾದರು.

ಸಾಂಸ್ಕøತಿಕ ವಿಭಾಗದ ಪ್ರತಿನಿಧಿಗಳಾಗಿ ದ್ವಿತೀಯ ವಾಣಿಜ್ಯ ವಿದ್ಯಾರ್ಥಿನಿ ಪ್ರತಿಕ್ಷಾ ಮತ್ತು ಪ್ರಥಮ ವಾಣಿಜ್ಯ ವಿದ್ಯಾರ್ಥಿ ಆಕಾಶ್ ವೈ.ಎನ್, ಕ್ರೀಡಾ ವಿಭಾಗದ ಪ್ರತಿನಿಧಿಗಳಾಗಿ ದ್ವಿತೀಯ ವಾಣಿಜ್ಯ ವಿಭಾಗದ ಮಿಥುನ್ ಕುಮಾರ್ ಮತ್ತು ಲತಾ, ಸಾಹಿತ್ಯಿಕ ವಿಭಾಗದ ಪ್ರತಿನಿಧಿಗಳಾಗಿ ದ್ವಿತೀಯ ವಿಜ್ಞಾನ ವಿಭಾಗದ ರಕ್ಷಿತಾ ಜಿ ಜಿ ಮತ್ತು ದ್ವಿತೀಯ ಕಲಾ ವಿಭಾಗದ ರಂಜಿತ್ ಇವರನ್ನು ಆಯ್ಕೆ ಮಾಡಲಾಯಿತು.

