ಬಂಟ್ವಾಳ:ತುಳುನಾಡಿನಲ್ಲಿ ಮೂಲ ಸಂಸ್ಕೃತಿ ನಂಬಿಕೊಂಡು ಬಂದಿರುವ ತುಳುವರು ಆರಾಧಿಸುವ ಪ್ರತಿಯೊಂದು ಆಚರಣೆ ಮತ್ತಿತರ ಪದ್ಧತಿಗಳಿಗೆ ಮೂಲ ನಂಬಿಕೆಯೂ ಇದೆ. ಇದರಿಂದಾಗಿ ಎಲ್ಲರೂ ಕೂಡಿ ಆಚರಿಸುವ ಆಟಿಡೊಂಜಿ ಕೂಟ ಮತ್ತಿತರ ಆಚರನೆಗಳು ಜನರ ಬದುಕನ್ನು ಶ್ರೀಮಂತಗೊಳಿಸುತ್ತವೆ ಎಂದು ಎಸ್ಡಿಎಂ ಕಾಲೇಜಿನ ಉಪನ್ಯಾಸಕ ಸ್ಮಿತೇಶ್. ಎಸ್.ಬಾರ್ಯ ಹೇಳಿದ್ದಾರೆ.
ತಾಲ್ಲೂಕಿನ ಬಿ.ಸಿ.ರೋಡು ಸಮೀಪದ ಸ್ಪರ್ಶ ಕಲಾ ಮಂದಿರದಲ್ಲಿ ಯುವವಾಹಿನಿ ಘಟಕ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಆಟಿಡೊಂಜಿ ಕೂಟ’ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಬಂಟ್ವಾಳ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು.ಯುವವಾಹಿನಿ ಘಟಕದ ಅಧ್ಯಕ್ಷ ಶಿವಾನಂದ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ಮಾತನಾಡಿದರು.
ಇದೇ ವೇಳೆ ಹಿರಿಯ ನಾಟಿ ವೈದ್ಯೆ ಮೀನಾಕ್ಷಿ ನಾರಾಯಣ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.ಯುವವಾಹಿನಿ ಮುಖವಾಣಿ ಮಾಸಿಕ ಯುವಸಿಂಚನ ಪತ್ರಿಕೆಯನ್ನು ಸಾಂಸ್ಕೃತಿಕ ನಿರ್ಧೇ ಶಕ ಭುವನೇಶ್ ಪಚ್ಚಿನಡ್ಕ ಬಿಡುಗಡೆಗೊಳಿಸಿದರು. ಸಂಪಾದಕಿ ಶುಭಾ ರಾಜೇಂದ್ರ ಇದ್ದರು.
