ಗಂಜಿಮಠ: ಮಧುಮೇಹ ಎಂಬ ಕಾಯಿಲೆ ವಿಶ್ವವ್ಯಾಪಿಯಾಗಿ ಹರಡಿದೆ. ಇಂದಿನ ದಿನಗಳಲ್ಲಿ ಆಹಾರ ಪದ್ಧತಿಯಿಂದ ವಯಸ್ಸಿನ ಮಿತಿಯಿಲ್ಲದೆ ಮಧುಮೇಹ ದಾಳಿಮಾಡುತ್ತಿದೆ. ಇಂತಹ ದಿನಗಳ ಮಧುಮೇಹ ಮುಕ್ತ ಭಾರತ ಜನಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಆಯುರ್ ಸ್ಪರ್ಶ  ಆಯುರ್ವೇದ ಆಸ್ಪತ್ರೆ ಗಂಜಿಮಠ, ಆಯುರ್ ಸ್ಪರ್ಶ ಡಯಾಬೀಟಿಕ್ ಇನೋವೇಟಿವ್ ಫೌಂಡೇಶನ್ (ರಿ) ಗಂಜಿಮಠ ಮತ್ತು ಸ್ಪರ್ಶ ಡಯಾಗ್ನೋಸ್ಟಿಕ್ ಕೈಕಂಬ ಇವರ ಸಂಯುಕ್ತ ಆಶ್ರಯದಲ್ಲಿ ಆಗಷ್ಟ್ 10ರಂದು ಮಧುಮೇಹ ಜಾಗೃತಿ ಶಿಬಿರ ಬೆಳಗ್ಗೆ 10ರಿಂದ 12.30ರವರೆಗೆ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ಗಂಜಿಮಠದಲ್ಲಿ ಜರುಗಲಿದೆ.

diabetes
ಮಧುಮೇಹ  ಶಿಬಿರವನ್ನು ಪದ್ಮವಿಭೂಷಣ ಡಾ|ಬಿ.ಎಂ ಹೆಗ್ಡೆ ಉದ್ಘಾಟಿಸಲಿದ್ದು, ಮಧುಮೇಹ ನಿಯಂತ್ರಣದ ಕುರಿತು ಮಾಹಿತಿ ನೀಡಲಿದ್ದಾರೆ. ವೈದ್ಯರ ಜೊತೆ ನೇರ ಸಂದರ್ಶನ ಕಾರ್ಯಕ್ರಮವು ಜರುಗಲಿದ್ದು, ಡಾ| ಶ್ರೀರಾಮ್ ಭಟ್ ಪ್ರೋಫೆಸರ್ ಕೆ.ಎಮ್.ಸಿ ಅತ್ತಾವರ ಭಾಗವಹಿಸಲಿದ್ದಾರೆ. ಡಾ|ಸತೀಶ್ ಶಂಕರ್ ಬಿ ಅಧ್ಯಕ್ಷರು ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ಗಂಜಿಮಠ ಮಧುಮೇಹ ನಿಯಂತ್ರಣದಲ್ಲಿ ಆಯುರ್ವೇದದ ಪಾತ್ರದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಹಿರಿಯ ಪತ್ರಕರ್ತರಾದ ಹರೀಶ್ ಅದೂರ್ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು ಎಂದು ಡಾ|ಸತೀಶ್ ಶಂಕರ್ ಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *