ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಸಂಘ ಹಾಗೂ ರೋಟರಿ ಕ್ಲಬ್ ಪುತ್ತೂರು ಮತ್ತು ಡಿರ್ಪಾಂಟ್‍ಮೆಂಟ್ ಆಫ್ ಪಬ್ಲಿಕ್ ಹೆಲ್ತ್ ಡೆಂಟಿಸ್ಟರೀ ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್‍ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು ಇವರ ಸಹಯೋಗಿತ್ವದಲ್ಲಿ ದಂತ ವೈದ್ಯಕೀಯ ಶಿಬಿರ ನಡೆಯಿತು.

ಡಾ|ಸಹನಾ ಮಬೆನ್ ಪ್ರೋಪೆಸರ್ ಡಿರ್ಪಾಂಟ್‍ಮೆಂಟ್ ಆಫ್ ಪಬ್ಲಿಕ್ ಹೆಲ್ತ್ ಡೆಂಟಿಸ್ಟರೀ ಎ.ಬಿ. ಶೆಟ್ಟಿ ಮೆಮೋರಿಯಲ್ ಕಾಲೇಜು ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ದೇಹದ ಆರೋಗ್ಯವನ್ನು ಕಾಪಾಡುವ ಮಹತ್ವದ ಬಗ್ಗೆ ತಿಳಿಸುತ್ತಾ ಐದು ಗೋಲ್ಡ್‍ನ್ ರೂಲ್ಸ್‍ಗಳನ್ನು ತಿಳಿಸಿದರು.

ದಂತ ವೈದ್ಯ ಡಾ| ಪ್ರಕಾಶ್‍ರವರು ಮಾತನಾಡಿ ಹಲ್ಲಿನ ಆರೋಗ್ಯ ಹಾಗೂ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದ ಅಧ್ಯಕ್ಷರು ಹಾಗೂ ಶಾಲಾ ಸಂಚಾಲಕ ಜೆ.ಪ್ರಹ್ಲಾದ್.ಶೆಟ್ಟಿ ಮಾತನಾಡಿ ಆರೋಗ್ಯ ವಿಷಯದಲ್ಲಿ ಕಾರ್ಯತತ್ಪರತಗೆ ಮಹತ್ವ ನೀಡುವುದು ಅಗತ್ಯ ಎಂದರು.
ಉದ್ಘಾಟನ ಸಮಾರಂಭದ ಬಳಿಕ ವಿದ್ಯಾರ್ಥಿಗಳಿಗೆ ಹಲ್ಲಿನ ಚಿಕಿತ್ಸೆ ಹಾಗೂ ಹಲ್ಲಿನ ಸುರಕ್ಷತೆಯ ಬಗ್ಗೆ ಪ್ರಾತ್ಯಕ್ಷಿತ ಮಾಹಿತಿ ನೀಡಲಾಯಿತು.
ಸಮಾರಂಭದಲ್ಲಿ ಶಿಬಿರದ ಸಂಯೋಜಕ ವೆಂಕಟರಾಮನ್ , ರೋಟರಿ ಕ್ಲಬ್ ಪುತ್ತೂರಿನ ಅಧ್ಯಕ್ಷರು ಹಾಗೂ ಸದಸ್ಯರು , ಶಾಲಾ ಆಡಳಿತಾಧಿಕಾರಿ ಸಿ.ಶ್ರೀಧರ್ , ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ .ವಿ.ಶೆಟ್ಟಿ , ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೇಸ್.ಪಿ.ಸಲ್ಡಾನಾ ಉಪಸ್ಥಿತರಿದ್ದರು
ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸ್ವಾಗತಿಸಿದರು, ಶಿಕ್ಷಕಿ ರೀಟಾ ಫೆರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿ , ವಂದಿಸಿದರು.

