ಬಂಟ್ವಾಳ:ದೇಶದಲ್ಲಿ ಉಳಿತಾಯ ಮನೋಭಾವ ಜೊತೆಗೆ ಪ್ರತಿಯೊಬ್ಬರ ಜೀವನ ಮಟ್ಟ ಸುಧಾರಣೆ ಹಾಗೂ ಕೌಟುಂಬಿಕ ಭದ್ರತೆಗಾಗಿ ವಿಮಾ ರಕ್ಷಣೆ ಅಗತ್ಯವಿದೆ. ಇಂತಹ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ವಿಮಾ ಪ್ರತಿನಿಧಿಗಳಿಗೆ ಸಮಾಜದಲ್ಲಿ ನಾಯಕತ್ವ ಒಲಿದು ಬರುತ್ತದೆ ಎಂದು ಬಂಟ್ವಾಳ ಎಲ್ಲೈಸಿ ಹಿರಿಯ ಶಾಖಾಧಿಕಾರಿ ಪ್ರೇಮನಾಥ ರಾವ್ ಹೇಳಿದ್ದಾರೆ.
ಬಂಟ್ವಾಳ ಮತ್ತು ಬೆಳ್ತಂಗಡಿ ಎಲ್ಲೈಸಿ ಪ್ರತಿನಿಧಿಗಳ ಎಸೋಸಿಯೇಶನ್ (ಲಿಕಾಯ್) ವತಿಯಿಂದ ಬಿ.ಸಿ.ರೋಡು ಲಯನ್ಸ್ ಸೇವಾ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಕನಸು’ ಒಂದು ದಿನದ ತರಬೇತಿ ಕಾರ್ಯಗಾರ ಕಾರ್ಯಕ್ರಮದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ಸಂಘದ ವಿಭಾಗೀಯ ಅಧ್ಯಕ್ಷ ಲೋಕೇಶ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಮಾ ಪ್ರತಿನಿಧಿಗಳ ಬೇಡಿಗೆ ಈಡೇರಿಕೆಗೆ ಆಗ್ರಹಿಸಿ ಸೆ.4ರಂದು ದೆಹಲಿ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು ತಿಳಿಸಿದರು. ಜೇಸಿ ತರಬೇತುದಾರ ಧೀರೇಂದ್ರ ಜೈನ್ ಮೂಡುಬಿದ್ರೆ, ನಿವೃತ್ತ ಅಭಿವೃದ್ಧಿ ಅಧಿಕಾರಿ ವಿದ್ಯಾಧರ ಶೆಟ್ಟಿ ಮಂಗಳೂರು, ಅಭಿವೃದ್ಧಿ ಅಧಿಕಾರಿಗಳಾದ ಎಂ.ವಿ.ಶೆಟ್ಟಿ ಬೆಳ್ತಂಗಡಿ, ದಿನೇಶ ಮಾಮೇಶ್ವರ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಬಂಟ್ವ್ವಾಳ ಸಂಘದ ಅಧ್ಯಕ್ಷ ರೋಹಿದಾಸ್ ಕುಂದರ್, ಅಧಿಕಾರಿಗಳಾದ ಗೋಕುಲ್ ಶೇಟ್, ಯೋಗೇಂದ್ರ ಬೆಳ್ತಂಗಡಿ ಮತ್ತಿತರರು ಇದ್ದರು.
ಇದೇ ವೇಳೆ ರಸಪ್ರಶ್ನೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರತಿನಿಧಿಗಳಾದ ನವೀನ್ ಕೊಡ್ಮಾಣ್ ಮತ್ತು ವಿಜಯಕುಮಾರಿ ಇಂದ್ರ ಅನಿಸಿಕೆ ವ್ಯಕ್ತಪಡಿಸಿದರು.
ಬೆಳ್ತಂಗಡಿ ಸಂಘದ ಅಧ್ಯಕ್ಷ ಕಿಶೋರ್ ಹೆಗ್ಡೆ ಸ್ವಾಗತಿಸಿ, ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ ವಂದಿಸಿದರು. ಹಿರಿಯ ಪ್ರತಿನಿಧಿ ವಸಂತ ಪ್ರಭು ಕಾರ್ಯಕ್ರಮ ನಿರೂಪಿಸಿದರು.
