ಮೂಡುಬಿದಿರೆ: “ದೀಪ ಹಚ್ಚುವುದು, ಕಟ್ಟಡ ಕಟ್ಟುವ ಕೆಲಸವೂ ಕಷ್ಟ. ಆರಿಸುವುದು, ಬೀಳಿಸುವುದು ಸುಲಭ. ಶಿಕ್ಷಣವನ್ನು ಮಾತೃಭಾಷೆಯಲ್ಲಿ ಪಡೆದರೆ ಇತರ ಭಾಷೆ ಕಲಿಯುವುದು ಸುಲಭ. ಕೀಳರಿಮೆಯಿಂದ ಹೊರಬನ್ನಿ. ನಿಮ್ಮಲ್ಲಿ ವಿಶೇಷ ಶಕ್ತಿಯಿದೆ ಹೊರತನ್ನಿ. ಶಿಕ್ಷಣದ ಉದ್ಧೇಶವೂ ಅದೇ” ಎಂದು ನಾಟಕಕಾರ, ಸಾಹಿತಿ, ನಿವೃತ್ತ ಪ್ರಾಂಶುಪಾಲ ಜಯಪ್ರಕಾಶ್ ಮಾವಿನಕುಳಿ ಹೇಳಿದರು.

23 mood BRP
ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ವಿದ್ಯಾರ್ಥಿ ಸಂಸತ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಶಾಲಾ ಹಳೆ ವಿದ್ಯಾರ್ಥಿ, ಪುರಸಭಾ ಸದಸ್ಯ ಪ್ರಸಾದ್ ಕುಮಾರ್ ಉದ್ಘಾಟಿಸಿದರು.ಮುಖ್ಯೋಪಾಧ್ಯಾಯಿನಿ ಪದ್ಮಜಾ ಪ್ರಮಾಣ ವಚನ ಬೋಧಿಸಿದರು.
ವಿದ್ಯಾರ್ಥಿ ನಾಯಕ ಅಬ್ದುಲ್ ರಫೀಜ್ ಸ್ವಾಗತಿಸಿ, ವಿದ್ಯಾರ್ಥಿ ಮಂತ್ರಿ ಯಶಸ್ವಿನಿ ನಿರೂಪಿಸಿ, ಉಪನಾಯಕ ಕಿರಣ್ ವಂದಿಸಿದರು.

By suddi9

Leave a Reply

Your email address will not be published. Required fields are marked *