ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪದವಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಪ್ರೆಸ್ ಡೇ ಕಾರ್ಯಕ್ರಮವನ್ನು ಕುವೆಂಪು ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಕಾರ್ಯಕ್ರಮವನ್ನು ವಿಜಯಕರ್ನಾಟಕ ಪತ್ರಿಕೆಯ ಪ್ರಾದೇಶಿಕ ಸಂಪಾದಕ ಯು.ಕೆ. ಕುಮಾರ್‍ನಾಥ್ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇವರು ಪತ್ರಿಕೋದ್ಯಮ ಇಂದು ಉದ್ಯಮವಾಗುತ್ತಿದೆ. ದಿಟ್ಟತನ, ಸತ್ಯತೆ, ಸಮಾಜದ ಸ್ವಾಸ್ಥತೆ ಕಾಪಾಡುವಲ್ಲಿ ಪತ್ರಿಕೋದ್ಯಮ ಕಾರ್ಯ ನಿರ್ವಹಿಸಬೇಕಾಗಿದೆ. ಪತ್ರಿಕೋದ್ಯಮ ಪದವು ಮರೆಮಾಚಿ ಮೀಡಿಯಾಕ್ಕೆ ಬದಲಾಗುತ್ತಿದೆ ಹೇಳಿದರು.
ದೃಶ್ಯ ಮಾಧ್ಯಮಗಳ ಹಾವಳಿಯಿಂದ ಮುದ್ರಣ ಮಾಧ್ಯಮದ ಪ್ರಸರಣಕ್ಕೆ ಏಟು ಬಿದ್ದಿದೆ. ಮುದ್ರಣ ಮಾಧ್ಯಮದಲ್ಲಿ ಇಂದು ಮುದ್ರಿತ ಪತ್ರಿಕೆಗಳು ಮಾತ್ರ ಸೀಮಿತವಾಗಿರದೆ, ವೆಬ್ ಸೈಟ್, ಬ್ಲಾಗಿಂಗ್ ಮೂಲಕ ದೃಶ್ಯ ಮಾಧ್ಯಮಗಳಿಗೆ ಪೈಪೋಟಿ ನೀಡುತ್ತಿರುವುದು ಶ್ಲಾಘನೀಯ. ಪತ್ರಿಕೋದ್ಯಮ ವಿಧ್ಯಾರ್ಥಿಗಳು ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ವೃತ್ತಿ ಜೀವನವನ್ನು ರೂಪಿಸಬೇಕೆಂದು ಅವರು ಹೇಳಿದರು. ಮಾಧ್ಯಮಗಳು ತಮ್ಮ ಪೂರ್ವ ನಿರ್ಣಿತ ಅಜೆಂಡಾವನ್ನು ಇಟ್ಟುಕೊಂಡು ಪೈಪೋಟಿ ನೀಡುತ್ತಿರುವುದು ಅಪಾಯಕಾರಿ ಬೆಳವಣಿಗೆ. ದೃಶ್ಯ ಮಾಧ್ಯಮ ಸಹಿತ ಅಂತರ್ ಜಾಲ ಮಾಧ್ಯಮಗಳಲ್ಲಿ ಒಳಿತು ಮತ್ತು ಕೆಡುಕು ಎರಡೂ ಇದ್ದು ಅದನ್ನು ಬಳಸುವ ರೀತಿ ಮುಖ್ಯ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದ ಅಧ್ಯಕ್ಷ ಮೋಹನ್ ಆಳ್ವಾ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪತ್ರಿಕೋದ್ಯಮ ಸುದ್ದಿಯನ್ನು ತಲುಪಿಸುವಲ್ಲಿ ವಿಶೇಷ ಪಾತ್ರ ವಹಿಸಿದೆ. ಇಂದು ಸುದ್ದಿಯನ್ನು ತಲುಪಿಸುವಲ್ಲಿ ಸ್ಪರ್ಧೆ ನಡೆಯುತ್ತಿದೆ. ಇದರಿಂದಾಗಿ ಸಮಾಜಕ್ಕೆ ಸುಳ್ಳು ಸುದ್ದಿ ಹಬ್ಬಿಸುವುದೇ ಹೆಚ್ಚಾಗುತ್ತಿದೆ. ಇಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಿಲ್ಲ. ಈ ಎಲ್ಲಾ ವಿಷಯಗಳನ್ನು ವಿದ್ಯಾರ್ಥಿಗಳು ಮನಗಂಡು ಪ್ರತಿಕೋಧ್ಯಮದ ಮೌಲ್ಯವನ್ನು ಉಳಿಸುವಳ್ಳಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಈ ಸಂಧರ್ಭದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ರಚಿಸಿದ ನಾಲ್ಕು ನ್ಯೂಸ್ ಜರ್ನಲ್ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಟೈಮ್ಸ್ ಆಫ್ ಬೆದ್ರ ಪತ್ರಿಕೆಯ ಸಂಪಾದಕ ಜೈಸನ್ ತಾಕೊಡೆ, ಆಳ್ವಾಸ್ ಕಾಲೇಜಿನ ಪಾಂ್ರಶುಪಾಲ ಡಾ. ಕುರಿಯನ್, ಕಲಾ ವಿಭಾಗದ ಡೀನ್ ಸಂಧ್ಯಾ ಕೆ.ಎಸ್ ಉಪಸ್ಥಿತರಿದ್ದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯ ಜೀವನ್ ರಾಮ್ ಸ್ವಾಗತಿಸಿದರು, ಪತ್ರಿಕೋಧ್ಯಮ ಪದವಿ ವಿದ್ಯಾರ್ಥಿನಿ ಚೈತ್ರಾಲಿ ಕಾರ್ಯಕ್ರಮ ನಿರೂಪಣೆ ಮಾಡಿದರು, ಉಪನ್ಯಾಸಕಿ ರೇಷ್ಮ ವಂದಿಸಿದರು.


