ಮೂಡುಬಿದಿರೆ: ಇಂದು ಪ್ರಕೃತಿಯ ಮೇಲೆ ಮಾನವನ ದೀರ್ಘ ದಾಳಿಯಿಂದ ಪ್ರಾಣಿ ಹಾಗೂ ಪಕ್ಷಿಸಂಕುಲಗಳು ವಿನಾಶದ ಅಂಚಿನಲ್ಲಿ ಇದೆ. ಬುದ್ಧಿಜೀವಿಯಾದ ಮನುಷ್ಯ ಪಕ್ಷಿ ಸಂಕುಲಕ್ಕೆ ದೊಡ್ಡ ತೊಡಕಾಗಿದ್ದಾನೆ ಎಂದು ಗುಬ್ಬಚ್ಚಿಗೂಡು ಪರಿಸರ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಹೇಳಿದರು.
ಮಿಜಾರು ಪ್ರೌಢಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆದ ಗುಬ್ಬಚ್ಚಿಗೂಡು ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಭತ್ತಿ ಹೋದ ಭತ್ತದ ಬೆಳೆ, ಬದಲಾದ ಗ್ರಾಮೀಣ ಪ್ರದೇಶಗಳು, ಕಾಡುಗಳ ನಾಶ, ಜಾಗತೀಕರಣ, ಆಧುನಿಕತೆಯಿಂದಾಗಿ ಪರಿಸರ ನಾಶದ ಸ್ಥಿತಿಯಲ್ಲಿರುವುದು ಖೇದಕರ ಪ್ರಾಣಿ ಪಕ್ಷಿ ಸಂಕುಲಗಳು ಇಂದು ತೆರೆಮರೆಗೆ ಸರಿದಿದೆ. ಹೀಗಾಗಿ ಪರಿಸರದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ದೌರ್ಜನ್ಯವಾಗುತ್ತಿದೆ. ಇದಕ್ಕಾಗಿ ಯುವಕರು, ವಿದ್ಯಾರ್ಥಿಗಳು ಅವುಗಳ ರಕ್ಷಣೆಗೆ ಪಣತೊಡಬೇಕಾಗಿದೆ. ಪ್ರಕೃತಿಯನ್ನು ಉಳಿಸುವ ಬೆಳೆಸುವ ಕಾರ್ಯ ನಾವಿಂದು ಮಾಡಬೇಕಾಗಿದೆ. ಗಿಡ ನೆಡುವ, ಬೇಸಿಗೆಯಲ್ಲಿ ಪಕ್ಷಿಗಳಿಗೆ ಪಾತ್ರೆಯಲ್ಲಿ ನೀರು ಇಡುವ ಕೆಲಸ ವಿದ್ಯಾರ್ಥಿಗಳು ಮಾಡುವುದು ಅಗತ್ಯ ಎಂದರು.

gubbacchi goodu
ಪತ್ರಕರ್ತ ಯಶೋಧರ ವಿ. ಬಂಗೇರ ಮಾತನಾಡಿ, ಶಾಲೆ ಗುಬ್ಬಚ್ಚಿಗೂಡು ಇದ್ದಂತೆ, ನಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಸರ್ಕಾರಿ ಶಾಲೆಯು ಒಂದು ಉತ್ತಮ ವೇದಿಕೆ.ವಿದ್ಯಾರ್ಥಿಗಳಾದ ನೀವು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪರಿಸರದ ಬಗ್ಗೆ ಕಾಳಜಿ ವಹಿಸಿ, ಪ್ರಾಣಿ ಪಕ್ಷಿಗಳ ಮೇಲೆ ಪ್ರೀತಿ ಬೆಳೆಸಿ, ರಕ್ಷಣೆ ಮಾಡುವುದು ಅಗತ್ಯ ಎಂದರು.
ಶಾಲಾ ಮುಖ್ಯ ಶಿಕ್ಷಕ ನವೀನ್ ಅಂಬೂರಿ ಅಧ್ಯಕ್ಷತೆವಹಿಸಿ ಮಾತನಾಡಿ, ಪರಿಸರದಲ್ಲಿರುವ ಜೀವ ಸಂಕುಲಗಳು ಇಂದು ನಶಿಸುತ್ತಿದೆ. ಪ್ಲಾಸ್ಟಿಕ್‍ನ ಅತಿಯಾದ ಬಳಕೆಯಿಂದ ನೈಸರ್ಗಿಕ ಸಂಪನ್ಮೂಲಗಳು ಹಾನಿಯಾಗುತ್ತಿದೆ ಎಂದರು.
ಗುಬ್ಬಚ್ಚಿಗೂಡು ಪರಿಸರ ಅಭಿಯಾನದ ರಮ್ಯ ಉಪಸ್ಥಿತರಿದ್ದರು. ಶಿಕ್ಷಕಿ ಪವಿತ್ರಾ ಸ್ವಾಗತಿಸಿದರು. ಶಾಲಾ ಶಿಕ್ಷಕ ಮುಖೇಶ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *