ಮೂಡುಬಿದಿರೆ: ತಾಂತ್ರಿಕ ಶಿಕ್ಷಣ ಪಡೆದವರು ನಿರುದ್ಯೋಗಿಗಳಾಗದೆ ಸ್ವಉದ್ಯೋಗಿಗಳಾಗಬೇಕೆನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕೌಶಲ್ಯಾಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದ್ದು ಬ್ಯಾಂಕ್ ಮೂಲಕ ಸಾಲಸೌಲಭ್ಯವನ್ನು ನೀಡುತ್ತಿದೆ. ಸೇವಾ ಸಂಸ್ಥೆಗಳು ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮೋದಿಯವರ ಯೋಜನೆಯನ್ನು ಸಾಕಾರಗೊಳಿಸಲು ಕೈಜೋಡಿಸಬೇಕು ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿವರು.

thanmay technology
ತನ್ಮಯಿ ಟೆಕ್ನಾಲಜಿ, ಜೇಸಿ ಮೂಡುಬಿದಿರೆ ತ್ರಿಭುವನ್, ರೋಟರಿ ಕ್ಲಬ್ ಸಂಯುಕ್ತವಾಗಿ ಇಲ್ಲಿನ ಸಮಾಜಮಂದಿರದಲ್ಲಿ ಶನಿವಾರ ಏರ್ಪಡಿಸಿದ ಎರಡು ದಿನಗಳ ರಾಜ್ಯಮಟ್ಟದ ಎಲ್‍ಇಡಿ ಎಲ್‍ಸಿಡಿ ಟಿವಿ ತಾಂತ್ರಿಕ ಕೌಶಲ್ಯ ಅಭಿವೃದ್ಧಿತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರುಡಸೆಟ್ ಉಜಿರೆಯ ಮಾಜಿ ಉಪ ನಿರ್ದೇಶಕ ಅನಂತಯ್ಯ ಆಚಾರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ತಾಂತ್ರಿಕ ಕೌಶಲ್ಯ ತರಬೇತಿ ಪಡೆಯುವುದರಿಂದ ಶೇ 20ರಷ್ಟು ಮಾಹಿತಿ ಲಭಿಸಲಿದೆ. ತಾಂತ್ರಿಕತೆ ಎಂಬುದು ನಿತ್ಯ ಬದಲಾಗುತ್ತಿರುವುದರಿಂದ ಶೇ 80 ರಷ್ಟನ್ನು ನಾವು ನಿತ್ಯ ವ್ಯವಹಾರದಲ್ಲಿ ಕಲಿಯಬೇಕು. ತಾಂತ್ರಿಕ ಕೌಶಲ್ಯದೊಂದಿಗೆ ಆಡಳಿತ ಕೌಶಲ್ಯವನ್ನು ಬೆಳೆಸಿಕೊಂಡಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದರು.
ಚೌಟರ ಅರಮನೆಯ ಕುಲದೀಪ ಎಂ. ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಬದಲಾಗುತ್ತಿರುವ ತಾಂತ್ರಿಕ ಕೌಶಲ್ಯಗಳಿಗೆ ನಾವು ಹೊಂದಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಅಧ್ಯಕ್ಷ ಡಾ. ರಮೇಶ್, ರುಡ್‍ಸೆಟ್‍ನ ಹಿರಿಯ ತರಬೇತುದಾರ ಜೇಮ್ಸ್ ಅಬ್ರಹಾಂ ಭಾಗವಹಿಸಿದರು. ತ್ರಿಭುವನ್ ಜೇಸಿಸ್‍ನ ಅಧ್ಯಕ್ಷೆ ಸಂಗೀತ ಪ್ರಭು ಅಧ್ಯಕ್ಷತೆ ವಹಿಸಿದ್ದರು. ತನ್ಮಯಿ ಟೆಕ್ನಾಲಜಿಯ ಪ್ರದೀಪ್ ಕುಮಾರ್ ವಂದಿಸಿದರು.

By Suddi9

Leave a Reply

Your email address will not be published. Required fields are marked *