ಬೆಂಗಳೂರು: ಪರ್ತಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪರಶುರಾಮ ವಾಘ್ಮೋರೆಯನ್ನು ಈ ಹಿಂದೆ ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

ಗೌರಿ ಕೊಲೆಯ ಪ್ರಮುಖ ಆರೋಪಿ ಪರಶುರಾಮ ವಾಘ್ಮೋರೆಗೆ ನೆರವು ನೀಡಿದ್ದಲ್ಲದೇ, ಬೈಕ್ ಮತ್ತು ಮನೆ ನೀಡಿ ಸಹಕರಿಸಿದ್ದಾನೆ ಎಂಬ ಆರೋಪದಡಿ ಸುಳ್ಯದ ಸಂಪಾಜೆ ನಿವಾಸಿ ಮೋಹನ್ ನಾಯಕ್ನನ್ನು ಬಂಧಿಸಲಾಗಿದೆ. ಮೋಹನ್ ನಾಯಕ್ನನ್ನು ಶುಕ್ರವಾರ ಬೆಳಗ್ಗೆ ಎಸಿಎಮ್ಎಮ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ಕಾಲ ಎಸ್ಐಟಿ ವಶಕ್ಕೆ ಪಡೆಯಲಾಗಿದೆ.
