ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೂಪಾಯಿ 100 ಬೆಲೆಬಾಳುವ ಹೊಸ ವರ್ಣದ ನೋಟನ್ನು ಕೆಲವೇ ದಿನಗಳಲ್ಲಿ ಪರಿಚಯಿಸಲಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ಈ ನೋಟ್ನಲ್ಲಿ ಮಹಾತ್ಮ ಗಾಂಧಿ ಚಿತ್ರವಿದ್ದು, ರಿಸರ್ವ್ ಬ್ಯಾಂಕ್ನ ಗವರ್ನರ್ ಉಜೀತ್ ಪಟೇಲ್ ಸಹಿ ಇರುತ್ತದೆ.

ನೋಟಿನ ಹಿಂಬಾಗದಲ್ಲಿ “ರಾನಿ ಕಿ ವಾವ್” ಚಿತ್ರವನ್ನು ಹಾಕಲಾಗಿದೆ. ರಾನಿ ಕಿ ವಾವ್ ಎಂಬುದು ಗುಜರಾತ್ನ ರಾಣಿಯ ಪರಂಪರೆಯ ತಾಣವನ್ನು ಮುದ್ರಿಸಲಾಗಿದೆ. ಇದೊಂದು ನೋಟ್ನ ಆಕರ್ಷಣೆಯೂ ಆಗಿದೆ. ಈ ನೋಟ್ ಲಾವೆಂಡರ್ ಬಣ್ಣವನ್ನು ಹೊಂದಿದೆ. ನೋಟಿನ ಎರಡು ಬದಿಯಲ್ಲಿ ರೇಖಾಗಣಿತದ ಮಾದರಿಯಲ್ಲಿ ವಿನ್ಯಾಸ ಮಾಡಲಾಗಿದೆ. ನೋಟಿನ ಆಯಾಮ 66ಮಿಮಿ*142ಮಿಮಿ ಇದೆ.
ಹಿಂದೆ ರಿಸರ್ವ್ ಬ್ಯಾಂಕ್ ಹೊರಡಿಸಿದ ರೂ.100 ರ ಶ್ರೆಯಾಂಕದಲ್ಲಿ ಎಲ್ಲಾ ಬ್ಯಾಂಕಿನ ನೋಟುಗಳು ಕಾನೂನುಬದ್ಧವಾಗಿ ಟೆಂಡರ್ ಆಗಿ ಮುಂದುವರೆಯುತ್ತದೆ.
ಸಾಮಾನ್ಯವಾಗಿ ರಿಸರ್ವ್ ಬ್ಯಾಂಕ್ ಪರಿಚಯಿಸುವ ಹೊಸ ನೋಟಿನ ವಿನ್ಯಾಸವನ್ನು ಪರಿಚಯಿಸುವಾಗ ಹಾಗೂ ಬ್ಯಾಂಕಿನ ಮೂಲಕ ಸಾರ್ವಜನಿಕರಿಗೆ ಹಂಚಿಕೆ ಹಾಗೂ ಮುದ್ರಣ ಮ್ತತು ಪೂರೈಕೆ ಕ್ರಮೇಣ ಹೆಚ್ಚಾಗುತ್ತದೆ.
