ಮೂಡುಶೆಡ್ಡೆ: ಆರು ಜನರ ದುಷ್ಕರ್ಮಿಗಳ ತಂಡವೊಂದು ಹಟ್ಟಿಗೆ ನುಗ್ಗಿ ತಲವಾರು ತೋರಿಸಿ ಬೆದರಿಸಿ ಹಾಲುಕೊಡುವ ಎರಡು ಜೆರ್ಸಿ ಹಸುಗಳನ್ನು ಕಳವು ಮಾಡಿದ ಕೃತ್ಯ ಮೂಡುಶೆಡ್ಡೆ ಪುರುಷೋತ್ತಮ ಅವರ ಮನೆಯಲ್ಲಿ ನಡೆದಿದೆ. ಕಳವಿಗೀಡಾದ ಹಸುಗಳ ಮೊತ್ತ ಸುಮಾರು 45,000 ರೂ. ಅಂದಾಜಿಸಲಾಗಿದೆ.

cattle

ಮಂಗಳವಾರ ಬೆಳಗ್ಗಿನ ಜಾವ ಸುಮಾರು ಮೂರು ಗಂಟೆಯ ಸುಮಾರಿಗೆ ಸುಮಾರು ಆರು ಮಂದಿ ದುಷ್ಕರ್ಮಿಗಳ ತಂಡ ಪುರುಷೋತ್ತಮ ಅವರ ಹಟ್ಟಿಗೆ ನುಗ್ಗಿ ದನ ಕಳವು ಮಾಡಿದೆ. ಈ ವೇಳೆ ಮನೆಯವರು ಎಚ್ಚರಗೊಂಡು ನೋಡಿದಾಗ ಮನೆಯವರಿಗೆ ತಲವಾರು ತೋರಿಸಿ ಬೆದರಿಸಿದ್ದಷ್ಟೇ ಅಲ್ಲದೆ ಅವರ ಮನೆಯ ನಾಯಿಯನ್ನು ಕೊಂದು ರಾಜಾರೋಷವಾಗಿ ದನಕಳವು ಮಾಡಿ ಪರಾರಿಯಾಗಿದ್ದಾರೆ. ಒಟ್ಟು ಆರು ಮಂದಿ ಆರೋಪಿಗಳಿದ್ದು, ಸುಮಾರು 25ರಿಂದ 30 ವರ್ಷ ಪ್ರಾಯದವರು ಎಂದು ಅಂದಾಜಿಸಲಾಗಿದೆ.

ಈ ಭಾಗದಲ್ಲಿ ಇದುವರೆಗೆ ನಾನಾ ಮನೆಗಳಲ್ಲಿ ಒಟ್ಟು 21 ದನಗಳು ಕಳವಿಗೀಡಾಗಿದ್ದು, ತಮಗೆ ಸೂಕ್ತ ರಕ್ಷಣೆ ನೀಡುವಂತೆ ಸ್ಥಳೀಯರು ಪೊಲೀಸರಲ್ಲಿ ವಿನಂತಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಶಾಸಕ ಉಮನಾಥ ಕೋಟ್ಯಾನ್ ನಿನ್ನೆ ಭೇಟಿ ನೀಡಿದ್ದು, ದನಗಳ್ಳರನ್ನು ಹಿಡಿದು ಗೂಂಡಾ ಕಾಯಿದೆ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.. ಮನೆಮಂದಿ ಜೀವನೋಪಾಯಕ್ಕಾಗಿ ಹಸುಗಳನ್ನು ಸಾಕುತ್ತಿದ್ದು, ಹಸು ಕಳವಿಗೀಡಾಗಿರುವುದರಿಂದ ಬದುಕಲು ತುಂಬಾ ಕಷ್ಟವಾಗುತ್ತಿದೆ. ಪೊಲೀಸರು ಆರೋಪಿಗಳನ್ನು ಹಿಡಿದು ಸ್ಥಳೀಯರಿಗೆ ರಕ್ಷಣೆ ಒದಗಿಸಬೇಕು ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಕಮೀಷನರ್ ಅವರನ್ನು ಭೇಟಿ ಮಾಡಿ ಮಾತಾಡುತ್ತೇನೆ ಎಂದು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *