ಕೈಕಂಬ: ಬಿ.ಸಿ ರೋಡ್- ಕೈಕಂಬದಲ್ಲಿರುವ ರಾಜಶ್ರೀ ಕಟ್ಟಡದಲ್ಲಿ ನೂತನವಾಗಿ ತೆರೆಯಲಾದ ಟಿ.ಎಸ್ ಕಂಪ್ಯೂಟರ್ಸ್ ಮತ್ತು ಸರ್ವೀಸ್ ಸಂಸ್ಥೆಯನ್ನು ಪೊಳಲಿ ಶ್ರೀ ರಾಮಕೃಷ್ಣ ತಪೋವನ ಶ್ರೀಸ್ವಾಮೀ ವಿವೇಕಾಚೈತ್ಯಾನಂದ ಸ್ವಾಮೀಜಿ ಉದ್ಘಾಟಿಸಿ ಶುಭ ಹಾರೈಸಿದರು.

ಸುಮಂಗಳಾ ಕ್ರೆಡಿಟ್ ಕೋ ಅಪರೇಟಿವ್ ಬ್ಯಾಂಕಿನ ಅಧ್ಯಕ್ಷ ನಾರಾಯಣ ಕಡೇಶ್ವಲ್ಯಾ, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿಯ ನಿರ್ದೇಶಕ ಜಿ.ಆನಂದ, ಕಟ್ಟಡದ ಮಾಲಕ ಪ್ರಕಾಶ್, ಸಾಯಿಲ್ ಆಯಿಲ್ ಸೆಂಟರ್ ಮಾಲಕ ರಾಜೇಶ್ ಪಾಣೆಮಂಗಳೂರು, ಭವಾನಿ ಶಂಕರ್, ಬಿ.ಸಿ ರೋಡ್ ದುರ್ಗಾ ಟ್ರೇಡರ್ಸ್ ಮಾಲಕ ವಿಶ್ವನಾಥ ಎಂ, ಎಡಪದವು ಗಾಣಿಗ ಸಂಘದ ಅಧ್ಯಕ್ಷ ಭಾಸ್ಕರ ಎಡಪದವು, ಬಿ.ಎಂ ಕಮಲಾಕ್ಷ ಉಪಸ್ಥಿತರಿದ್ದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ತಹಸೀಲ್ದಾರ್ ಪರಂದರ ಹೆಗ್ಡೆ, ಕಂದಾಯ ಇಲಾಖೆ ಅಧಿಕಾರಿ ಸೀತಾರಾಮ ಪೂಜಾರಿ, ಸದಾಶಿವ ಕೈಕಂಬ, ಶೀತಲ್ ಆಗಮಿಸಿ ಶುಭ ಹಾರೈಸಿದರು. ಪ್ರಕಾಶ್













