ಉಡುಪಿ: ಜೇಸಿಐ ವಲಯ 15 ರಲ್ಲಿ ಉಡುಪಿ, ದ.ಕ ಮತ್ತು ಉತ್ತರಕನ್ನಡ ಜಿಲ್ಲೆಯಲ್ಲಿ ಸಂಚರಿಸಲಿರುವ ಸರಣಿ ತರಬೇತಿಗಳ ವಿನೂತನ ಜೇಸಿ ಐಡಿ ಯಾತ್ರೆ-2018 ಕಾರ್ಯಕ್ರಮ ಜುಲ್ಯೆ 10ರಂದು ಉಡುಪಿ ದುರ್ಗಾ ಇಂಟರ್ ನ್ಯಾಷನಲ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿಕಟ ಪೂರ್ವ ವಲಯಾದ್ಯಕ್ಷ ಸಂತೋಷ್‍ಜಿ, ಐಡಿಯಾತ್ರೆಯು ವಲಯಾದ್ಯಂತ ಸಂಚರಿಸಿ ಘಟಕಗಳ ಸದಸ್ಯರಿಗೆ ವಿವಿಧ ರೀತಿಯ ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ಆಯೋಜನೆ ಮಾಡಿ ಆ ಮೂಲಕ ಸಮಾಜದಲ್ಲಿ ಪರವರ್ತನೆ ತರಲು ಕೆಲಸ ಮಾಡುತ್ತದೆ ಎಂದರು.
ತರಬೇತುದಾರರಾಗಿ ಕೆ.ಕೆ ಶಿವರಾಂ, ವಿನಯ್ ಮುಂಡ್ಕೂರು ಭಾಗವಹಿಸಿದ್ದರು. ವೇದಿಕೆಯಲ್ಲಿ ವಲಯಾಡಳಿತ ಮಂಡಳಿ ಸಲಹೆಗಾರ ಮಹೇಶ್‍ಅಂಚನ್, ಐಡಿಯಾತ್ರೆ ಸಂಯೋಜಕಿ ಸಂದ್ಯಾ ರಾಜೇಶ್, ಉಡುಪಿ ಸಿಲ್ವರ್ ಸ್ಟಾರ್ ಅದ್ಯಕ್ಷೆ ಮಲ್ಲಿಕಾ ಕೆ.ಅರ್, ಉಡುಪಿ ಸಿಟಿ ಅಧ್ಯಕ್ಷ ರಪೀಕ್ ಖಾನ್, ಕಲ್ಯಾಣಪುರ ಅದ್ಯಕ್ಷ ಉಮೇಶ್ ಅಮೀನ್ ಮುಂತಾದವರಿದ್ದರು.
ವಲಯ ಉಪಾದ್ಯಕ್ಷರಾದರಘುನಾಥ್ ನಾಯಕ್, ರಾಘವೇಂದ್ರ ಪ್ರಭು ಕರ್ವಾಲು, ವಲಯಾಧಿಕಾರಿಗಳಾದ ಮನೋಜ್ ಕಡಬ, ಜ್ಯೋತಿ ರಮಾನಾಥ ಶೆಟ್ಟಿ, ಸುಧಾಕರ್ ಕಾರ್ಕಳ, ಸುನೀಲ್ ಬಂಗೇರ ಭಾಗವಹಿಸಿದ್ದರು.ಅತಿಥೇಯ ಘಟಕಾದ್ಯಕ್ಷೆ ಉಡುಪಿ ಇಂದ್ರಾಳಿಯ ಶೆರ್ಲಿ ಮನೋಜ್ ಅದ್ಯಕ್ಷತೆ ವಹಿಸಿದ್ದರು.
ರಿತೇಶ್ ಕುಮಾರ್,ಅಶೋಕ್ ಪೂಜಾರಿ ಸ್ವಾಗತಿಸಿ ವಂದಿಸಿದರು.
