ಬಂಟ್ವಾಳ: ತಾಲೂಕಿನ ಅರಳ ಗ್ರಾಮದ ಗುಡ್ಡೆಯಂಗಡಿಯಲ್ಲಿ ಓಂ ಜನಹಿತಾಯ ಸಂಸ್ಥಾನಂ ಟ್ರಸ್ಟ್ ಸಂಸ್ಥೆಯ ವತಿಯಿಂದ ನಡೆಸಲ್ಪಡುವ ನೂತನವಾಗಿ ಪ್ರಾರಂಭಗೊಳ್ಳಲಿರುವ ಓಂ ಜನಹಿತಾಯ ವಿದ್ಯಾಲಯದ ಪ್ರಾರಂಭೋತ್ಸವ ಜು.16 ರಂದು ನಡೆಯಲಿದ್ದು ಅದರ ಪೂರ್ವಭಾವಿ ಸಮಾಲೋಚನ ಸಭೆ ಬುಧವಾರ ಸಂಸ್ಥೆಯ ಸಭಾಂಗಣದಲ್ಲಿ ಜರಗಿತು.

Om Hitaya
ಬಡಗಬೆಳ್ಳೂರು ಗ್ರಾ.ಪಂ.ಅಧ್ಯಕ್ಷೆ ಜಯಂತಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ನೂತನ ವಿದ್ಯಾ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.
ಅರಳ ಗ್ರಾ.ಪಂ. ಉಪಾಧ್ಯಕ್ಷ ಜಗದೀಶ್ ಆಳ್ವ ಅಗ್ಗೊಂಡೆ ಅವರು ಮಾತನಾಡಿ, ಅರಳ ಗ್ರಾಮ ತೀರಾ ಗ್ರಾಮೀಣ ಪ್ರದೇಶವಾಗಿದ್ದು ಶೈಕ್ಷಣಿಕವಾಗಿ ಹಿಂದುಳಿದಿದೆ.ಆಧುನಿಕ ಸರ್ಧಾತ್ಮಕ ಜಗತ್ತಿನಲ್ಲಿ ಆಂಗ್ಲ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆಯಿದ್ದು ಪೆÇೀಷಕರು ಆಂಗ್ಲ ಮಾಧ್ಯಮ ಶಿಕ್ಷಣವನ್ನು ಅವಲಂಬಿಸಿದ್ದಾರೆ. ಈ ನಿಟ್ಟಿನಲ್ಲಿ ಜನೋಪಯೋಗಿ ಉದ್ದೇಶದಿಂದ ಸ್ಥಾಪಿಸಲಾದ ಈ ವಿದ್ಯಾ ಸಂಸ್ಥೆಯಿಂದ ಪರಿಸರದ ನಾಲ್ಕು ಗ್ರಾಮಗಳ ಗ್ರಾಮೀಣ ಪರಿಸರದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುವಂತಾಗಲಿ ಹೇಳಿದರು.
ಕಡೆಗುಂಡ್ಯ ಗ್ರಾ.ಪಂ.ಸದಸ್ಯ ಪ್ರವೀಣ್ ಆಳ್ವ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಟ್ರಸ್ಟ್‍ನ ಉದ್ದೇಶಗಳ ಮಾಹಿತಿ ನೀಡಿದರು. ಓಂ ಜನಹಿತಾಯ ಸಂಸ್ಥಾನಂ ಟ್ರಸ್ಟ್‍ನ ಟ್ರಸ್ಟಿ ಭಾಸ್ಕರ ಶೆಟ್ಟಿ ಅವರು ಮಾತನಾಡಿ, ಟ್ರಸ್ಟ್‍ನ ಅಧ್ಯಕ್ಷ , ಮುಂಬಯಿ ಉದ್ಯಮಿ ಶಾಂತರಾಮ ಶೆಟ್ಟಿ ಅವರ ಆಶಯದಂತೆ ಕಳೆದ 2 ವರ್ಷಗಳಿಂದ ವೃದ್ಧಾಶ್ರಮ ನಡೆಸಿಕೊಂಡು ಬಂದಿದ್ದು ಶೈಕ್ಷಣಿಕ ಸೇವಾಕಾರ್ಯಗಳಿಗಾಗಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ವರ್ಷ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯಗಳ ಜತೆ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು ಸಲಹೆ ಸೂಚನೆ ನೀಡಿದರು. ಟ್ರಸ್ಟಿಗಳಾದ ವಿಶ್ವನಾಥ ಶೆಟ್ಟಿ, ದಯಾನಂದ ಶೆಟ್ಟಿ, ಅರುಣಾ ಶೆಟ್ಟಿ, ತಾ.ಪಂ. ಸದಸ್ಯ ನಾಗೇಶ ಶೆಟ್ಟಿ, ಕೊೈಲ ಸ.ಹಿ. ಪ್ರಾ.ಶಾಲಾ ಮುಖ್ಯ ಶಿಕ್ಷಕ ವೇದಾನಂದ ಕಾರಂತ, ಗ್ರಾ.ಪಂ.ಸದಸ್ಯರಾದ ಹಾಜಬ್ಬ, ವಸಂತ, ಲಕ್ಷ್ಮೀಧರ ಶೆಟ್ಟಿ, ಪ್ರಮುಖರಾದ ಉಮೇಶ್ ಅರಳ, ಸುನಿಲ್ ಶೆಟ್ಟಿ, ನಂದರಾಮ ರೈ ಮತ್ತಿತರರು ಉಪಸ್ಥಿತರಿದ್ದರು.
ಟ್ರಸ್ಟ್ ಸಿಬಂದಿ ಶಿಲ್ಪಾ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ರಂಜನ್ ಕುಮಾರ್ ಶೆಟ್ಟಿ ವಂದಿಸಿದರು.

By suddi9

Leave a Reply

Your email address will not be published. Required fields are marked *