ಮೂಡುಬಿದಿರೆ: ಕರಾವಳಿ ಪ್ರದೇಶವು ಆರ್ಥಿಕವಾಗಿ ಹಿಂದುಳಿದಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಸೋಮವಾರ ವಿಧಾನಸಭೆಯಲ್ಲಿ ಒತ್ತಾಯಿಸಿದರು.
ಈ ಭಾಗದಲ್ಲಿ ಕೌಶಲ್ಯಾಭಿವೃದ್ಧಿ ಉದ್ದಿಮೆಗಳನ್ನು ಸ್ಥಾಪಿಸಬೇಕು. ಈ ಕುರಿತು ಮಾರ್ಗದರ್ಶನ, ಮೂಲ ಸೌಕರ್ಯ, ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದೂ ಅವರು ಲಿಖಿತ ಪತ್ರದಲ್ಲಿ ಕೋರಿದ್ದಾರೆ.

ಇದಕ್ಕೆ ಉತ್ತರಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಕೆ.ಜೆ.ಜಾರ್ಜ್ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ರಾಜ್ಯ ಮಟ್ಟದ ಸಮಿತಿ ಸಭೆಗಳಲ್ಲಿ ಅನುಮೋದನೆಗೊಂಡ ಪ್ರಸ್ತಾವನೆಗಳಲ್ಲಿ ಕರಾವಳಿ ಜಿಲ್ಲೆಗಳಾದ ಉಡುಪಿ, ದ.ಕ, ಉ.ಕ ಜಿಲ್ಲೆಗಳಲ್ಲಿ ಒಟ್ಟು ಮೂರು ಉದ್ದಿಮೆಗಳು ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಂಡಿದೆ. 107.93 ಕೋಟಿ ಬಂಡವಾಳ ಹೂಡಿಕೆಯಾಗಿದ್ದು 415 ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಜಾರಿಯಲ್ಲಿರುವ ಕರಾವಳಿ ಕರ್ನಾಟಕ ನೀತಿ 2014 – 19ರಲ್ಲಿ ರಾಜ್ಯದಲ್ಲಿನ ತಾಲೂಕುಗಳನ್ನು ಸರಾಸರಿ ತಲಾ ಕೈಗಾರಿಕಾ ಬಂಡವಾಳ ಹೂಡಿಕೆ ಮತ್ತು ಸರಾಸರಿ ತಲಾ ಉದ್ಯೋಗ ಪ್ರಮಾಣ ಆಧರಿಸಿ ಹೈದರಾಬಾದ್ – ಕರ್ನಾಟಕ ಮತ್ತು ಹೈದ್ರಾಬಾದ್ – ಕರ್ನಾಟಕೇತರ ತಾಲೂಕುಗಳೆಂದು ವರ್ಗೀಕರಿಸಿ ಬೃಹತ್ ಮತ್ತು ಮೆಗಾ ಕೈಗಾರಿಕಾ ಬಂಡವಾಳ ಆಕರ್ಷಿಸಲು ಕೆಲವು ಮಾನದಂಡಗಳನ್ನು ಅನುಸರಿಸಿ ಕ್ರಮ ಕೈಗೊಳ್ಳಲಾಗುವುದು. ದ.ಕ ಜಿಲ್ಲೆಯನ್ನು ಕೈಗಾರಿಕಾ ನೀತಿ 2014- 19 ರಲ್ಲಿ ಹೈದ್ರಾಬಾದ್ – ಕರ್ನಾಟಕೇತರ ಪ್ರದೇಶ ನಿಯಮದಡಿ ವರ್ಗೀಕರಿಸಿದ್ದು ಕೈಗಾರಿಕೆಗಳನ್ನು ಸ್ಥಾಪಿಸಲು ಮಾನದಂಡದಲ್ಲಿ ಸೂಚಿಸಿದ ಎಲ್ಲಾ ರಿಯಾಯತಿ ಹಾಗೂ ಉತ್ತೇಜನಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಕಾಲಮಿತಿಯಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಅನುಸರಿಸಿದ ನಿಯಮಗಳೇನು? ಎಂಬ ಉಮಾನಾಥ ಕೋಟ್ಯಾನ್ರ ಪ್ರಶ್ನೆಗೆ ಉತ್ತರಿಸಿದ ಕೆ. ಜೆ. ಜಾರ್ಜ್ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯು 15 ಕೋಟಿಯಿಂದ 500 ಕೋಟಿ ವರೆಗಿನ ಯೋಜನೆಗಳಿಗೆ ಹಾಗೂ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯು 500 ಕೋಟಿಗಿಂತ ಹೆಚ್ಚಿನ ಬಂಡವಾಳ ಹೂಡಿಕೆಯ ಯೋಜನೆಗಳಿಗೆ ಅನುಮೋದನೆ ನೀಡುತ್ತದೆ. ಈ ಸಮಿತಿಯು ಅನುಮೋದನೆ ನೀಡಿದ ಯೋಜನೆಗಳನ್ನು ಕಾಲಕಾಲಕ್ಕೆ ಅನುಷ್ಠಾನಕ್ಕೆ ತರಲಾಗುತ್ತದೆ ಎಂದರು.
ಕರವಳಿ ಭಾಗದಲ್ಲಿ ಭಾರೀ ಮಳೆ ನೆರೆಯಿಂದಾಗಿ ಪ್ರಕೃತಿ ವಿಕೋಪ ಉಂಟಾಗಿದ್ದು ಇದರಿಂದಾದ ನಷ್ಟದ ಪ್ರಮಾಣ ಹಾಗೂ ಇದನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರ ಕೈಗೊಂಡ ಮುಂಜಾಗ್ರತಾ ಕ್ರಮಗಳ ಮಾಹಿತಿ ನೀಡುವಂತೆಯೂ ಅವರು ಕೋರಿದರು.
ಮೂಡುಬಿದಿರೆಯಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಮೂಡುಬಿದಿರೆಯಲ್ಲಿ ಮೆಟ್ರಿಕ್ ನಂತರದ ತಲಾ 100 ರಂತೆ ವಿದ್ಯಾರ್ಥಿ / ವಿದ್ಯಾರ್ಥಿ ನಿಲಯಗಳನ್ನು ಅನುಕೂಲವಾಗುವಂತೆ ತೆರೆಯುವ ಮೂಲಕ ಹಿಂದುಳಿದ ವರ್ಗದವರಿಗೆ ಶೈಕ್ಷಣಿಕ ಪ್ರೋತ್ಸಾಹವನ್ನು ನೀಡಬೇಕೆಂದು ಸಮಾಜ ಕಲ್ಯಾಣ ಸಚಿವದಲ್ಲಿ ಮನವಿ ಮಾಡಿದರು. ಈ ಕ್ಷೇತ್ರ ವ್ಯಾಪ್ತಿಯಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಲ್ಲದಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಮೂಡುಬಿದಿರೆ ಕ್ಷೇತ್ರ ವ್ಯಾಪ್ತಿಯ 5 ಕಿ.ಮೀ ವ್ಯಾಪ್ತಿಯ ಕಾಲೇಜುಗಳಲ್ಲಿ ಕಲಿಯುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಒಟ್ಟಾರೆ ಬೇಡಿಕೆ ಹಾಗೂ ಆಯ ವ್ಯಯದ ಲಭ್ಯತೆಯನ್ನು ಆಧರಿಸಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸ್ಥಳ ಪರಿಶೀಲನೆಯ ವರದಿಯೊಂದಿಗೆ ಸಲ್ಲಿಸುವ ಪ್ರಸ್ತಾವನೆಯನ್ನು ಪರಿಗಣಿಸಿ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ಉತ್ತರಿಸಿದರು.
ಮೂಡುಬಿದಿರೆ ರೋಟರಿ ಕ್ಲಬ್ ಪದಗ್ರಹಣ
ರೋಟರಿ ಅವಕಾಶಗಳ ಆಗರ
ಮೂಡುಬಿದಿರೆ: ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಕ್ಲಬ್ ಅವಕಾಶಗಳ ಆಗರವಾಗಿದೆ. ಸೇವೆಯೊಂದಿಗೆ ಪಾರದರ್ಶಕತೆಯನ್ನು ಹೊಂದುವ ಮೂಲಕ ಜಾಗತಿಕ ಮನ್ನಣೆ ಗಳಿಸಿದೆ. ಜಿಲ್ಲೆಗೆ ಮಾದರಿಯಾಗಿ ಕೆಲಸ ಮಾಡುತ್ತಿರುವ ಇಲ್ಲಿನ ರೋಟರಿ ಸಂಸ್ಥೆಯು ‘ಗ್ಲೋಬಲ್ ಗ್ರ್ಯಾಂಟ್’ನ್ನು ಪಡೆದು ಮಾದರಿಯಾದ ಕೆಲವನ್ನು ಮಾಡುವಂತಾಗಲಿ ಎಂದು ರೋಟರಿ ಜಿಲ್ಲಾ ಉಪರಾಜ್ಯಪಾಲ ಪ್ರಕಾಶ್ ಕಾರಂತ ಹೇಳಿದರು.
ಇಲ್ಲಿನ ನಿಶ್ಚಿತಾ ಪ್ಯಾರಡೈಸ್ ಹಾಲ್ನಲ್ಲಿ ಸೋಮವಾರ ರೋಟರಿ ಕ್ಲಬ್ನ 2018-19ನೇ ಸಾಲಿನ ಅಧ್ಯಕ್ಷ ಡಾ. ರಮೇಶ್ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಮಂಗಳೂರಿನ ಖ್ಯಾತ ಮಕ್ಕಳ ತಜ್ಞ ಹಾಗೂ ಎಜೆ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಪ್ರಾಧ್ಯಾಪಕ ಡಾ. ಸಂತೋಷ್ ಸೋನ್ಸ್ ಪದಗ್ರಹಣ ನೆರವೇರಿಸಿ ಶುಭ ಹಾರೈಸಿದರು.
ಝೋನಲ್ ಲೆಫ್ಟಿನೆಂಟ್ ಡಾ. ಸುಧೀರ್ ಪ್ರಭು ಎಂ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮನುಕುಲಕ್ಕೆ ಪೂರಕವಾದ ಅನೇಕ ಸೇವಾ ಯೋಜನೆಗಳು ಈ ಕ್ಲಬ್ನಿಂದ ನಡೆಯುವಂತಾಗಲಿ ಎಂದರು. ನೂತನ ಅಧ್ಯಕ್ಷ ಡಾ. ರಮೇಶ್ ಮಾತನಾಡಿ ಈ ಹಿಂದಿನ ಎಲ್ಲಾ ಯೋಜನೆಗಳನ್ನು ಮುಂದುವರಿಸುವುದರೊಂದಿಗೆ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪುರಸಭೆಯ ಪರಿಸರ ಇಂಜಿನಿಯರ್ ಶಿಲ್ಪಾ ಅವರನ್ನು ಸನ್ಮಾನಿಸಲಾಯಿತು. ನಾಗರಾಜ ಹೆಗ್ಡೆ ಹಾಗೂ ಸುನಿಲ್ ನಾಯಕ್ ಅವರನ್ನು ಹೊಸ ಸದಸ್ಯರನ್ನಾಗಿ ಸೇರ್ಪಡೆಗೊಳಿಸಲಾಯಿತು.
ರೋಟಾಲೆಟ್ಸ್ ಯೋಜನೆಯಡಿ 6 ಮಂದಿ ಫಲಾನುಭವಿಗಳಿಗೆ ನಿರ್ಮಿಸಿ ಕೊಟ್ಟ ಶೌಚಾಲಯಗಳ ಕಿಟ್ನ್ನು ಹಸ್ತಾಂತರಿಸಲಾಯಿತು. ಹಾಗೂ ವಲಯದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಎಸ್ಎಸ್ಎಲ್ಯಲ್ಲಿ ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಡಯಾಬಿಟಿಕ್ ರೋಗಿ ಅಕ್ಷತಾ ಅವರಿಗೆ ಇನ್ಸುಲಿನ್ ನೀಡಲಾಯಿತು.ನಿರ್ಗಮನ ಅಧ್ಯಕ್ಷ ಶ್ರೀಕಾಂತ್ ಕಾಮತ್ ತನ್ನ ಸೇವಾ ಅವಧಿಯಲ್ಲಿ ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು. ಗಣೇಶ್ ಕಾಮತ್ ಸಂಪಾದಕತ್ವದಲ್ಲಿ ಹೊರ ತಂದ ರೋಟಾದ್ರಿ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ವೇದಿಕೆಯಲ್ಲಿ ನೂತನ ಕಾರ್ಯದರ್ಶಿ ಸಿಎಚ್ ಅಬ್ದುಲ್ ಗಫೂರ್, ನಿರ್ಗಮನ ಕಾರ್ಯದರ್ಶಿ ಮಹಮ್ಮದ್ ಆರಿಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೆ.ಜೆ ಪಿಂಟೋ ಕಾರ್ಯಕ್ರಮ ನಿರ್ವಹಿಸಿದರು
ಚಿತ್ರ:10ಎಂಡಿಬಿಇನ್ಸ್ಟಾಲೇಷನ್
