ವಾಮಂಜೂರು:ಸ್.ಡಿ.ಎಂ. ಮಂಗಳಜ್ಯೋತಿ ಸಮಗ್ರ ಶಾಲೆ ವಾಮಂಜೂರು, ಇಲ್ಲಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿ ಸಂಸತ್ತು, ಸಾಹಿತ್ಯ, ಪರಿಸರ-ವಿಜ್ಞಾನ, ಕ್ರೀಡಾ ಸಂಘ, ಗ್ರಾಹಕರ ಕ್ಲಬ್, ಯೋಗ ಕೇಂದ್ರ, ಚಿತ್ರಕಲಾ ಸಂಘ, ಸ್ಕೌಟ್ ಮತ್ತು ಗೈಡ್ಸ್, ಬುಲ್ ಬುಲ್, ಕರಾಟೆ, ನೃತ್ಯ ತರಗತಿಗಳ ಉದ್ಘಾಟನೆಯನ್ನು ಉದ್ಯಮಿ ಪ್ರತೋಷ್ ಮಲ್ಲಿಯವರು ನೆರವೇರಿಸಿ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಪ್ರೊ| ಎ ರಾಜೇಂದ್ರ ಶೆಟ್ಟಿ ಇವರು ವಹಿಸಿ ಮಾತನಾಡುತ್ತಾ ಸಂವಿಧಾನದ ಅರ್ಥವನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಅದರಂತೆ ನಡೆದು ಅದಕ್ಕೆ ಗೌರವವನ್ನು ಕೊಡುವುದು ಪ್ರತಿಯೊಬ್ಬರ ಕರ್ತವ್ಯ. ಮಾನವನ ಬದುಕು ಉತ್ತಮ ರೀತಿಯಲ್ಲಿ ನಡೆಯಬೇಕಾದರೆ ಸಂವಿಧಾನದ ಚೌಕಟ್ಟು ಕಾನೂನು ಅದರ ವ್ಯವಸ್ಥೆ ಪಾಲಿಸುವುದರಿಂದ ಜೀವನ ಸುಖಮಯವಾಗುತ್ತದೆ. ಉತ್ತಮ ಸಮಾಜ ಕಟ್ಟಬೇಕಾದರೆ ವ್ಯವಸ್ಥೆಗಳು ಸರಿ ಇರಬೇಕು.ವ್ಯವಸ್ಥೆಗಳು ಸರಿ ಇರಬೇಕಾದರೆ ಪ್ರತಿಯೊಬ್ಬನು ಕಾನೂನು ಚೌಕಟ್ಟಿನಲ್ಲಿ ನಡೆಯಬೇಕು. ಕಾನೂನುಗಳು ರಚನೆಯಾಗಿರುವುದು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಎಂದು ತಿಳಿಸಿ ವಿದ್ಯಾರ್ಥಿ ಸರಕಾರಗಳು ತಮ್ಮ ಹಂತದ ಕಾರ್ಯಕ್ರಮಗಳನ್ನು ಉತ್ತಮಪಡಿಸಿಕೊಂಡು ಉತ್ತಮ ನಾಯಕರಾಗಲು ಈ ವೇದಿಕೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.
ಪ್ರೌಢಶಾಲಾ ವಿದ್ಯಾರ್ಥಿ ಸಂಸತ್ತಿಗೆ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಅಶೋಕ್ ಕುಮಾರ್ ಶೆಟ್ಟಿಯವರು ಮತ್ತು ಪ್ರಾಥಮಿಕ ವಿಭಾಗಕ್ಕೆ ಶ್ರೀಮತಿ ರೇಣುಕಾ ಕೆ ಎಸ್ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಶಶಿಕಾಂತ್ ರೈ ಸಂಸ್ಥೆಯಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗೆ ದತ್ತುನಿಧಿಯನ್ನು ಪ್ರಾರಂಭಿಸಿ ಅದನ್ನು ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ಆಡಳಿತಾಧಿಕಾರಿ ಗಣೇಶ್ ಭಟ್ ವಿ ಉಪಸ್ಥಿತರಿದ್ದರು. ಶ್ರೀಯುತ ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ರೇಣುಕಾ ಕೆ ಎಸ್ ದನ್ಯವಾದ ಸಲ್ಲಿಸಿದರು. ಶಿಕ್ಷಕ ಶೇಖರ್ ಕಡ್ತಲ ಕಾರ್ಯಕ್ರಮ ನಿರ್ವಹಿಸಿದರು.
