ಮಂಗಳೂರು: ನಗರ ಹೊರವಲಯದ ಅಡ್ಯಾರ್ ಕಣ್ಣೂರು ಮಸೀದಿಯ ಬಳಿ ಮಂಗಳವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮ್ರತಪಟ್ಟು ಇತರ ಮೂವರು ಗಾಯಗೊಂಡ ಘಟನೆ ನಡೆದಿದೆ. ಮ್ರತಪಟ್ಟ ಯುವಕನನ್ನು ಅಡ್ಯಾರ್ ನಿವಾಸಿ ಮುಹಮ್ಮದ್ ಫಾರೂಕ್(25) ಎಂದು ಗುರುತಿಸಲಾಗಿದೆ.
ಹನೀಫ್, ಜುನೈದ್, ಸರ್ಫ್‍ರಾಜ್ ಎಂಬವರಿಗೆ ಗಾಯಗಳಾಗಿದ್ದು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಠೆ ಗೊತ್ತಾಗಬೇಕಿದೆ.
