ಉಡುಪಿ: ಸಮಾಜದಲ್ಲಿಉತ್ತಮ ನಾಯಕತ್ವಅತ್ಯಂತಅಗತ್ಯವಾಗಿದೆಅದೇರೀತಿ ಸಂವಹನ ಕಲೆಯ ಮೂಲಕ ಇಂದಿನ ವ್ಯವಹಾರಿಕ ಬದುಕಿನಲ್ಲಿಯಶಸ್ಸು ಪಡೆಯಲು ಸಾದ್ಯಎಂದು ಕಾಪು ವಿಧಾನ ಸಭಾ ಶಾಸಕ ಲಾಲಾಜಿಆರ್.ಮೆಂಡನ್ ಹೇಳಿದರು.
ಅವರು ಜೂನ್.24 ರಂದುಆದಿತ್ಯವಾರ ಪೆರ್ಡೂರು ಸುಭ್ರಾಯಕಲ್ಯಾಣ ಮಂಟಪದಲ್ಲಿಜೇಸಿಐ ಪರ್ಕಳದ ಮೂಲಕ ಪ್ರವರ್ತಿಸಲ್ಪಟ್ಟ ಜೇಸಿಐ ಪೆರ್ಡೂರು ಕದಳಿಪ್ರಿಯ ನೂತನಘಟಕದಉದ್ಘಾಟನೆ ಮತ್ತು ಪದ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.
ಜೇಸಿಯಲ್ಲಿ ಸಿಗುವ ತರಬೇತಿಗಳನ್ನು ನಾವು ನಮ್ಮ ವ್ಯಕ್ತಿತ್ವದಲ್ಲಿ ತೊಡಗಿಸಿಕೊಂಡಾಗ ನಮ್ಮ ಬದುಕಿಗೆ ಹೊಸ ಅರ್ಥ ಬರುತ್ತದೆಎಂದರು.
ಉದ್ಘಾಟನೆ ನೆರವೇರಿಸಿದ ಜೇಸಿಐ ವಲಯಾದ್ಯಕ್ಷರಾಕೇಶ್‍ಕುಂಜೂರು ಮಾತನಾಡಿ,ಜೇಸಿಯಲ್ಲಿ ಸಿಗುವ 5ಅವಕಾಶಗಳನ್ನುಬಳಸಿಕೊಂಡು ಸಾಮಾಜಿಕ ಮತ್ತು ನಮ್ಮ ವೈಯತ್ತಿಕ ಬದುಕಿನಲ್ಲಿಯಶಸ್ಸು ಸಾಧಿಸಬಹುದಾಗಿದೆಎಂದರು.
ಕಾರ್ಯಕ್ರಮದಲ್ಲಿಅತಿಥಿಯಾಗಿಅರಣ್ಯಅಧಿಕಾರಿಕರುಣಾಕರಆಚಾರ್ಯ,ವಲಯಉಪಾದ್ಯಕ್ಷರಾಘವೇಂದ್ರ ಪ್ರಭುಕರ್ವಾಲು,ವಲಯದಅಭಿವೃದ್ದಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕಕಾರ್ತಿಕೇಯ ಮದ್ಯಸ್ಥ,ವಲಯ ಸಂಯೋಜಕಿ ಆಶಾ ಬಿ ಮುಂತಾದವರಿದ್ದರು.
ಪರ್ಕಳ ಘಟಕದಅದ್ಯಕ್ಷರಾದದೇವೇಂದ್ರ ನಾಯಕ್ ಸ್ವಾಗತಿಸಿದರು.ಈ ಸಂದರ್ಭದಲ್ಲಿ ನೂತನಅದ್ಯಕ್ಷೆ ಶ್ಯಾಂಭವಿ ಕುಲಾಲ್‍ರವರ ಪದಪ್ರಧಾನ ನಡೆಯಿತು.ಕಾರ್ಯಕ್ರಮದಲ್ಲಿ ಪರ್ಕಳ ಜೇಸಿಯ ಅದ್ಯಕ್ಷರಿಗೆ ಮತ್ತು ಶಾಸಕರಿಗೆ ಸನ್ಮಾನಿಸಲಾಯಿತು.
ವನಮಹೋತ್ಸವಕಾರ್ಯಕ್ರಮದಅಡಿಯಲ್ಲಿ ಸುಮಾರು 500 ಗಿಡಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಜೆಸಿರೆಟ್ ಅದ್ಯಕ್ಷೆಇಂದಿರಾ ಶೆಟ್ಟಿ,ಜೇಜೆಸಿಅದ್ಯಕ್ಷೆ ಸುಪ್ರಿಯಾ ಶೆಟ್ಟಿ,ಜೊತೆ ಕಾರ್ಯದರ್ಶಿ ಸ್ವರಾಜ್,ಸುಜಾತಾ ನಾಯ್ಕ,ಮುಕಾಂಬಿಕಾ,ಹೇಮಲತಾ ಮುಂತಾದವರಿದ್ದರು.
