ಕೋಲಾರ : ಜಗತ್ತಿಗೆ ಯೋಗವನ್ನು ಪ್ರಚಾರಗೊಳಿಸಿದ್ದು ಕೋಲಾರ ಜಿಲ್ಲೆ, ಯೋಗಕ್ಕೆ ರೋಗ ತಡೆಯುವ ಶಕ್ತಿ ಇದೆ. ದೇಹವನ್ನು ಸದೃಢವಾಗಿಡಲು, ಆರೋಗ್ಯವಾಗಿರಲು ಮತ್ತು ಲವಲವಿಕೆಯಿಂದಿರಲು ಸಹಕಾರಿಯಾಗುತ್ತಿದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಎಸ್.ಮುನಿಯಪ್ಪ ರವರು ತಿಳಿಸಿದರು.
ಅವರು ಕೋಲಾರ ನಗರದ ಜಿಲ್ಲಾ ಭಾರತ ಸೇವಾದಳ ಸಮಿತಿ ಮತ್ತು ಆನಂದ ಮೂರ್ತಿ ವಿದ್ಯಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆನಂದ ಮೂರ್ತಿ ವಿದ್ಯಾ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬದ್ದನು ಇಡೀ ಜಗತ್ತಿಗೆ ಯೋಗವನ್ನು ಪರಿಚಯಿಸಿದ ವ್ಯಕ್ತಿಯಾಗಿದ್ದು, ಅವರ ಯೋಗ ಜೀವನ ಕ್ರಮವನ್ನು ತಿಳಿಸಿದರು. ಎಲ್ಲಾ ಬಗೆಯ ಯೋಗವನ್ನು ಮಾಡಲು ಸಾಧ್ಯವಾಗದಿದ್ದರೂ ಪ್ರಾಣಯಾಮ, ಸೂರ್ಯ ನಮಸ್ಕಾರ ವಜ್ರಾಸನವನ್ನು ಮಾಡಲು ತಿಳಿಸಿದರು.

ಜಿಲ್ಲಾ ಭಾರತಸೇವಾದಳ ಅಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿ ಇಂದಿನ ವೇಗದ ಯುಗದಲ್ಲಿ ಒಬ್ಬ ವ್ಯಕ್ತಿಯ ದೇಹ ಮನಸ್ಸು ಮತ್ತು ಆತ್ಮವನ್ನು ಬೆಸೆಯಲು ಯೋಗ ಮಹತ್ವದ ಪಾತ್ರ ವಹಿಸಿದೆ. ಇದು ಬುದ್ದ ಶಾಂತಿಯುತ ಮನುಷ್ಯನನ್ನು ಕೊಂಡೊಯ್ಯುವ ಮಾರ್ಗವಾಗಿದೆ. ಕೋಲಾರ ತಾಲ್ಲೂಕಿನ ಬೆಳ್ಳೂರು ಗ್ರಾಮ ಬಿ.ಕೆ.ಎಸ್. ಅಯ್ಯಾಂಗರ್ ರವರು ಈ ಜಗತ್ತಿಗೆ ಯೋಗವನ್ನು ಪರಿಚಯಿಡಿಸಿಕೊಟ್ಟವರು. ಅವರ ವಿಶ್ವ ಪರ್ಯಟನೆ, ಅವರು ನಡೆದು ಬಂದ ದಾರಿಯ ಬಗ್ಗೆ ತಿಳಿಸಿಕೊಟ್ಟರು.
ಜಿಲ್ಲಾ ಸಮಿತಿಯ ವಿಶೇಷ ಆಹ್ವಾನಿತರಾದ ಆರ್.ಶ್ರೀನಿವಾಸನ್ ಮಾತನಾಡಿ ಭಾರತವು ನಮ್ಮದೇ ನೆಲದಲ್ಲಿ ಹುಟ್ಟಿದ ಯೋಗವನ್ನು ಕಾಪಾಡುವಲ್ಲಿ ಬೆಳೆಸುವಲ್ಲಿ ಮತ್ತಷ್ಟು ಪರಿಶ್ರಮ ವಹಿಸಬೇಕು. ನಾವು ನಮ್ಮ ಸಂಸ್ಕøತಿಯ ಬಗ್ಗೆ ಹೆಮ್ಮೆ ಇಟ್ಟುಕೊಳ್ಳಬೇಕು. ನಮ್ಮ ಸಂಪ್ರದಾಯದ ಬಗ್ಗೆ ನಾವೇ ಅವಮಾನ ತೋರಿಸಿದೆ ಈ ಜಗತ್ತು ನಮ್ಮನ್ನು ಹೇಗೆ ನಂಬುತ್ತದೆ ಎಂದು ತಿಳಿಸಿದರು.
ಜಿಲ್ಲಾ ಸಮಿತಿಯ ಸದಸ್ಯ ವಿ.ಪಿ.ಸೋಮಶೇಖರ್ ಮಾತನಾಡಿ 2015ರಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಭಾರತ ಸರ್ಕಾರ ಪ್ರಕಟಿಸಿದ ನೂರು ರೂ ಮತ್ತು ಹತ್ತು ರೂಗಳ ನಾಣ್ಯಗಳನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಿದರು.
ಪಿ.ಪಿ.ಎಸ್. ಡಯಟ್ನ ಮುಖ್ಯ ಶಿಕ್ಷಕಿ ಮಮತ ಮಕ್ಕಳಿಗೆ ಯೋಗ ತರಬೇತಿ ನೀಡಿದ ಕಾರ್ಯಕ್ರಮದಲ್ಲಿ ವಾಸವಿ ಕ್ಲಬ್ನ ಅಧ್ಯಕ್ಷ ಓಂಪ್ರಕಾಶ್, ಸದಸ್ಯರಾದ ಸುಬ್ಬರಾಜು, ಮುಖ್ಯಶಿಕ್ಷಕಿ ಟಿ.ಎನ್. ಪದ್ಮಾವತಿ, ಸಹಶಿಕ್ಷಕರು ಮತ್ತು ಎ.ಇ.ಎಸ್. ಶಾಲೆಯ ಸಹ ಶಿಕ್ಷಕರು ಮತ್ತು ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಭಾರತಸೇವಾದಳದ ಜಿಲ್ಲಾ ಸಂಘಟಕ ಎಂ.ಬಿ. ದಾನೇಶ್ ನಡೆಸಿಕೊಟ್ಟರು.
