ಬಂಟ್ವಾಳ: ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದಲ್ಲಿ ಸೆ.3 ರಂದು ನಡೆಯಲಿರುವ ಇಲ್ಲಿನ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕ ದಶಾಮಾನೋತ್ಸವ ಮತ್ತು ರಾಷ್ಟ್ರೀಯ ಧರ್ಮ ಸಂಸದ್ ಕಾರ್ಯಕ್ರಮಕ್ಕೆ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರನ್ನು ಶುಕ್ರವಾರ ಅವರ ಮಠಕ್ಕೆ ತೆರಳಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಹ್ವಾನಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಟ್ರಸ್ಟಿಗಳಾದ ಚಿತ್ತರಂಜನ್ ಗರೋಡಿ ಮೋಹನ್ ಉಜ್ಜೋಡಿ, ಜಿಲ್ಲಾ ಸಂಚಾಲಕರಾದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ , ಬಂಟ್ವಾಳ ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಸಾಲಿಯಾನ್ ನರಿಕೊಂಬು, ಸಂಘಟನಾ ಕಾರ್ಯದರ್ಶಿಗಳಾದ ಕೃಷ್ಣಪ್ಪ ಗುಡಿಗಾರ್, ರವಿ ಪೂಜಾರಿ ಉಪಸ್ಥಿತರಿದ್ದರು.

BTW_JUNE22_1
ಧರ್ಮಸಂಸದ್‍ನಲ್ಲಿ ಉತ್ತರ ಹಾಗೂ ದಕ್ಷಿಣ ಭಾರತದ ಸಾಧು ಸಂತರು ಭಾಗವಹಿಸಲಿದ್ದು ಈಗಾಗಲೇ ಉಡುಪಿಯ ಪೇಜಾವರ ಮಠದ ವಿಶ್ವೇಶ್ವರ ತೀರ್ಥಸ್ವಾಮೀಜಿ, ಹುಬ್ಬಳಿಯ ಸಿದ್ದರೂಢ ಮಠ, ಮೂರು ಸಾವಿರ ಮಠ, ಬೆಳಗಾವಿಯ ನಿತ್ಯಾನಂದ ಆಶ್ರಮದ ಶ್ರೀ ವಿಜಯಾನಂದ ಸ್ವಾಮೀಜಿ, ಬೈಲಹೊಂಗಲ ಶಿವಾನಂದ ಮಠದ ಶ್ರೀ ಮಹಾದೇವ ಸಾಮೀಜಿ, ಡಾ. ಶಿವಾನಂದ ಭಾರತಿ ಸ್ವಾಮೀಜಿ, ಬೆಳಗಾವಿ ಗಾಲೇಶ್ವರದ ಶ್ರೀ ಚಿದಾನಂದ ಮಾಹಾಸ್ವಾಮಿ, ದುರದುಂಡೀಶ್ವರ ಮಠದ ನೀಲಕಂಠ ಮಹಾಸ್ವಾಮಿಗಳು ಮತ್ತಿತರ ಸಂತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅಲ್ಲದೆ ಮಂಗಳೂರು, ಮುಂಬಾಯಿ, ರಾಜಾಸ್ಥಾನ, ಗುಜರಾತ್, ನಾಸಿಕ್, ಪುಣೆ, ಸಾಂಗ್ಲಿ, ಬೆಳಗಾವಿ ಹುಬ್ಬಳ್ಳಿ, ಬೈಲಹೊಂಗಲದಲ್ಲಿ ಪೂರ್ವಭಾವಿ ಸಭೆಯನ್ನು ಸ್ವಾಮೀಜಿಗಳ ನೇತೃತ್ವದಲ್ಲಿ ಮಾಡಲಾಗಿದೆ.
ಚಿತ್ರ: ರಾಷ್ಟ್ರೀಯ ಧರ್ಮ ಸಂಸದ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಬಂದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳನ್ನು ಸುಬ್ರಹ್ಮಣ್ಯ ಮಠಾಧೀಶರು ಶಾಲು ಹಾಕಿ ಬರಮಾಡಿಕೊಂಡರು.

By suddi9

Leave a Reply

Your email address will not be published. Required fields are marked *