1

ಪುತ್ತೂರು: ತಾಲೂಕು ವರ್ತಕ ಸಂಘದಿಂದ ಸ್ಥಳೀಯ ಶಾಸಕ ಸಂಜೀವ ಮಟಂದೂರುರವರಿಗೆ ಪೆಟಾ ತೊಡಿಸಿ ಹಾರ ಹಾಕುವ ಮುಖಾಂತರ ಸನ್ಮಾನಿಸಲಾಯಿತು.

ಈ ವೇಳೆ ಸಂಜೀವ ಮಟಂದೂರ್ ರವರು ಮಾತನಾಡಿ, ಪುತ್ತೂರಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ವರ್ತಕರ ಕೊಡುಗೆ ಅಪಾರವಾಗಿದ್ದು, ಅಭಿವೃದ್ಧಿಗಾಗಿ ವರ್ತಕರಲ್ಲಿ ಸರ್ವ ಸಹಕಾರವನ್ನು ಕೋರಿದರು.

ವರ್ತಕ ಸಂಘದ ಅಧ್ಯಕ್ಷ ಸುರೆಂದ್ರ ಕಿಣಿ ಮಾತನಾಡಿ, ಸಮಗ್ರ ಪುತ್ತೂರನ್ನು ಅಭಿವೃದ್ಧಿಗೊಳಿಸುವಲ್ಲಿ ವರ್ತಕ ಸಂಘವೂ ಶಾಸಕರೊಂದಿಗೆ ಸದಾ ಬದ್ಧವಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಥಿ, ಕೇಶವ ಪೈ, ಗೊಪಾಲಕೃಷ್ಣ ಭಟ್, ಸುಂದರ ಗೌಡ, ಭಾಸ್ಕರ ಬಾರ್ಯ, ಸಂಘದ ಉಪಾಧ್ಯಕ್ಷ ಸಂತೊಷ್ ಶೆಟ್ಟಿ, ವಿಶ್ವಪ್ರಸಾದ್ ಸೆಡಿಯಾಪು, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಫೀಕ್ ದರ್ಬೆ, ಸದಸ್ಯರಾದ ರಾಜೆಶ್ ಯು.ಪಿ, ಜಯಂತ ನಡುಬೈಲ್, ಅರವಿಂದ ಭಗವಾನ್ ರೈ, ಮಹದೆವ ಶಾಸ್ತ್ರೀ, ಸಿತಾರಾಮಶಾಸ್ತ್ರಿ, ಉದಯ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

02

By suddi9

Leave a Reply

Your email address will not be published. Required fields are marked *