accident_nnr_newsk_84769

ಮಂಗಳೂರು: ಟೆಂಪೊಂದು ದ್ವೀಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟಿರುವ ಘಟನೆ ನಗರದ ನಂತೂರು ಸರ್ಕಲ್ ಬಳಿ ಮಂಗಳವಾರ ಸಂಜೆ ನಡೆದಿದೆ.

ಮೃತ ಮಹಿಳೆಯನ್ನು ಬೆಳ್ತಂಗಡಿ ನಿವಾಸಿ ಸಮರೀನ್(26) ಎಂದು ಗುರುತಿಸಲಾಗಿದೆ.

ಸಮರೀನ್ ಅವರು ತನ್ನ ಪತಿ ಸಮೀರ್ ಅವರೊಂದಿಗೆ ದ್ವೀಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಈಚರ್ ಟೆಂಪೋವೊಂದು ಢಿಕ್ಕಿ ಹೊಡೆದು ಈ ಘಟನೆ ನಡೆದಿದೆ.

ಸ್ಕೂಟರ್ ಚಲಾಯಿಸುತ್ತಿದ್ದ ಸಮರೀನ್ ಅವರ ಪತಿ ಮೊಹಮ್ಮದ್ ಸಮೀರ್(30) ಅವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 

 

 

 

 

 

 

 

By Suddi9

Leave a Reply

Your email address will not be published. Required fields are marked *