ಸುದ್ದಿ9ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಮೇಲೆ ಮತ್ತು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮೇಲೆ ಬ್ಲ್ಯಾಕ್ ಮೇಲ್ ಮಾಡಿ ಕೋಟ್ಯಾಂತರ ರೂಪಾಯಿ ವಸೂಲಾತಿಯ ಉದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಎಂದು ಬಿಜೆಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಶ್ರೀ ರಾಮಚಂದ್ರಾಪುರ ಮಠ ಮತ್ತು ಸ್ವಾಮೀಜಿಗಳು ದೇಶದಾದ್ಯಂತ ಹಲವಾರು ಶೈಕ್ಷಣಿಕ, ಧಾಮರ್ಿಕ, ಸಾಮಾಜಿಕ, ಚಟುವಟಿಕೆಗಳ ಮೂಲಕ ಸಾಮಾಜಿಕ ಬದ್ಧತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ನಮ್ಮ ಸಂಸ್ಕೃತಿ ಮತ್ತು ಧಾಮರ್ಿಕ ಶ್ರದ್ಧಾ ಬಿಂದುಗಳ ಗೌರವರಕ್ಷಣೆಗಾಗಿ ಕಳಕಳಿಯಿಂದ ಕಾರ್ಯ ಪ್ರವೃತ್ತರಾಗಿದ್ದಾರೆ. ಗೋಮಾತೆಯ ರಕ್ಷಣೆಗೆ ರಾಜ್ಯದಲ್ಲಿಯೇ ಎಲ್ಲರಿಗೂ ಮಾದರಿಯಾಗಿ ಯೋಜನೆಗಳನ್ನು ರೂಪಿಸಿದ್ದರು. ಸಮಾಜಮುಖಿ ಚಿಂತನೆಯ, ಅಭಿವೃದ್ಧಿಪರ ಯೋಜನೆಗಳಿಂದ ಎಲ್ಲರಿಂದಲೂ ಪ್ರಶಂಸಿಸಲ್ಪಟ್ಟಿದ್ದರು. ಇಂತಹ ಗೌರವಾನ್ವಿತ ವ್ಯಕ್ತಿತ್ವದ ಮಹನೀಯರ ಮಾನಹಾನಿಕರ ಮತ್ತು ಗೌರವಕ್ಕೆ ಮಸಿ ಬಳಿಯುವ ಹೇಯಕೃತ್ಯವಿದೆಂದು ಬಿಜೆಪಿ ಕಟುವಾಗಿ ಟೀಕಿಸಿದೆ.
ಈ ಬಗ್ಗೆ ವಸ್ತುನಿಷ್ಠ ತನಿಖೆ ನಡೆಸಿ ವೈಯಕ್ತಿಕ ಲಾಭಕ್ಕಾಗಿ ಸಾಮಾಜಿಕ ಸ್ವಾಸ್ಥ ಕೆಡಿಸುತ್ತಿರುವ ಅನಪೇಕ್ಷಿತ ವ್ಯಕ್ತಿಗಳ ಬಗ್ಗೆ ಕಾನೂನು ರೀತ್ಯಾ ಕ್ರಮಗಳನ್ನು ಕೈಗೊಳ್ಳಬೇಕು. ನಮ್ಮ ಸಂಸ್ಕೃತಿ, ಸಮಾಜ ಮತ್ತು ಶ್ರದ್ಧಾ ಬಿಂದುಗಳ ರಕ್ಷಣೆಗೆ, ಪೋಷಣೆಗೆ ಬದ್ಧರಾಗಿರುವ ಸಜ್ಜನ ಶಕ್ತಿಗಳಿಗೆ, ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡುವ ಇಲ್ಲಸಲ್ಲದ ಅವಮಾನಕಾರಿ ಮತ್ತು ಗೊಂದಲಮಯ ಹೇಳಿಕೆ ನೀಡುವ ದುಷ್ಟಶಕ್ತಿಗಳಿಗೆ ಸೂಕ್ತ ಶಿಕ್ಷೆ ನೀಡಬೇಕಾಗಿದೆ ಎಂದು ಜಿಲ್ಲಾ ವಕ್ತಾರ ಸತೀಶ್ ಪ್ರಭು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *