ಬೆಂಗಳೂರು: ಕೇಂದ್ರ ರೈಲ್ವೆ ಸಚಿವ ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ಅವರ ವಿರುದ್ದ ಯುವತಿಯೋರ್ವಳು ಮಾಡಿದ ಆರೋಪಕ್ಕೆ ಸಂಬಂಧಿಸಿದ ವಿಷಯ ದೇಶದಾದ್ಯಂತ ಬಿಸಿಬಿಸಿ ಚರ್ಚೆಗೆ ಕಾರಣವಾಗುತ್ತಿದೆ.

kartik

mytri


dv1
ನಿನ್ನೆ ಮಡಿಕೇರಿಯ ಕುಶಾಲನಗರದಲ್ಲಿ ಕೇಂದ್ರ ರೈಲ್ವೆ ಸಚಿವ ಸಾದನಂದ ಗೌಡ ಅವರ ಪುತ್ರ ಕಾರ್ತಿಕ್ ಹಾಗೂ ಉದ್ಯಮಿಯೋರ್ವರ ಪುತ್ರಿ ಜೊತೆ ಎಂಗೇಜ್ ಮೆಂಟ್ ನಡೆಯುತ್ತಿದ್ದ ಸಂದರ್ಭದಲ್ಲಿ ಸಿನಿನಟಿ ಮೈತ್ರಿಯಾ ಎಂಬಾಕೆ ತನಗೂ ಕಾರ್ತಿಕ್ಗೂ ಈ ಮೊದಲೇ ಮದುವೆ ನಡೆದಿತ್ತು ಎಂಬ ಬಾಂಬ್ ಸಿಡಿಸಿದ್ದರು.
ಅಲ್ಲದೆ ಮದುವೆಯ ಬಳಿಕ ಆತ ತನ್ನ ಜೊತೆ ಅತ್ಯಾಚಾರ ಎಸಗಿದ್ದ ಎಂದು ಮೈತ್ರಿಯಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ನಿನ್ನೆಯವರೆಗೆ ಇರದ ಅರಶಿನ ಕೊಂಬು ಇಂದು ಪ್ರತ್ಯಕ್ಷ:
ನಟಿ ಮೈತ್ರಿಯಾ ಆರೋಪ ಮಾಡಿದ್ದ ಸಂದರ್ಭ ಆಕೆಯ ಕುತ್ತಿಗೆಯಲ್ಲಿ ಅರಶಿನ ಕೊಂಬವಿನ ತಾಳಿ ಕಂಡುಬಂದಿರಲಿಲ್ಲ. ಆದರೆ ಇಂದಿನ ಬೆಳವಣಿಗೆಯ ನಂತರ ಟಿವಿ ಮಾಧ್ಯಮದ ಮುಂದೆ ಕಾಣಿಸಿಕೊಂಡ ಮೈತಿಯಾ ಕುತ್ತಿಗೆಯಲ್ಲಿ ಅರಶಿನ ಕೊಂಬಿನ ತಾಳಿ ಕಾಣಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ. ದೇವಸ್ಥಾನವೊಂದಕ್ಕೆ ತೆರಳಿದ್ದ ಸಂದರ್ಭ ಆಕೆ ತಾನೇ ಅರಶಿನ ನ ಕೊಂಬು ಕಟ್ಟಿಸಿದ್ದಾರೆಂದು ಹೇಳಲಾಗಿದೆ.
ನನಗೇನೂ ಗೊತ್ತಿಲ್ಲ ಎಂದ ಸಿಎಂ:
ಸಿಎಂ ಸಿದ್ದರಾಮಯ್ಯ ಅವರ ಬೆಂಗಳೂರಿನ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಈ ಬಗ್ಗೆ ಕೇಳಿದಾಗ,ನಟಿ ಮೈತ್ರಿಯಾ ಯಾರೆಂದೇ ಗೊತ್ತಿಲ್ಲ. ಆಕೆ ಕಾಂಗ್ರೆಸ್ನ ಕಾರ್ಯಕರ್ತೆ ಎಂಬುದೂ ಗೊತ್ತಿಲ್ಲ. ಗೌಡ ಕುಟಂಬದ ವಿರುದ್ದ ಬಂದಿರುವ ಆರೋಪವೂ ಗೊತ್ತಿಲ್ಲ. ಕಾನೂನಿನ ಪ್ರಕಾರ ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂದಷ್ಟೇ ಹೇಳಿ ಜಾಗ ಖಾಲಿ ಮಾಡಿದ್ದಾರೆ.
ನನ್ನ ವಿರುದ್ಧ ಷಡ್ಯಂತ್ರ ಎಂದ ಡೀವಿ:
ಕೇರಳದ ಪ್ರವಾಸದಲ್ಲಿರುವ ಸಚಿವ ಡಿವಿಎಸ್ ಇದು ನನ್ನ ಕುಟುಂಬದ ಏಳಿಗೆಯನ್ನು ಸಹಿಸದವರು ಮಾಡಿದ ಷಡ್ಯಂತ್ರದ ಒಂದು ಭಾಗವಾಗಿದೆ. ನನ್ನ ಮಗ ತಪ್ಪು ಮಾಡಿದ್ದಾನೆಂದರೆ ಆತನಿಗೆ ಕಾನೂನಾತ್ಮಕ ಶಿಕ್ಷೆಯಗಲಿ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಚರ್ಚಿಸಲು ಅವರು ಬಿಜೆಪಿ ರಾ.ಅಧ್ಯಕ್ಷ ಅಮಿತಾ ಶಾ ಅವರನ್ನು ಭೇಟಿ ಮಾಡಲು ಹೊರಟಿದ್ದಾರೆಂಬ ಸುದ್ದಿ ಇದೆ.
ವಿವರಣೆ ಕೇಳಿದ ಅಮಿತ್ ಷಾ:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪ್ರಕರಣದ ಬಗ್ಗೆ ಡಿವಿಎಸ್ ಅವರಲ್ಲಿ ದೂರವಾಣಿ ಮುಖಾಂತರ ವಿವರಣೆ ಕೇಳಿದ್ದಾರೆಂದು ತಿಳಿದುಬಂದಿದೆ.
ಗೌಡ ವಿರುದ್ಧಪ್ರತಿಭಟನೆಗಿಳಿದ ಕಾಂಗ್ರೆಸ್:
ಕಾರ್ಯಕರ್ತರು ವಂಚನೆಗೊಳಗಾದ ಯುವತಿಗೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿದ್ದಾರೆ.
ಒಟ್ಟಾರೆ ಈ ಪ್ರಕರಣ ಬಿಸಿಬಿಸಿ ಚರ್ಚೆಗೆ ಕಾರಣವಾಗುತ್ತಿದ್ದ ವಿಸ್ತೃತ ವಿಚಾರಣೆ ನಡೆದ ಬಳಿಕಷ್ಟೇ ಸತ್ಯಾಂಶ ಹೊರಬೀಳಲಿದೆ.

By suddi9

Leave a Reply

Your email address will not be published. Required fields are marked *