DSC_0152

ಉಡುಪಿ: ಲೋಂಬಾರ್ಡ್ ಮೆಮೋರಿಯಲ್ ಸ್ಮಾರಕ ಮಿಷನ್‍ಆಸ್ಪತ್ರೆ, ಹಿರಿಯ ನಾಗರಿಕ ಸಂಸ್ಥೆ, ಜಮಿಯ್ಯತುಲ್ ಫಲಾಹ್‍, ಬಡಗಬೆಟ್ಟು ಕೋ.ಅ.ಸೋಸೈಟಿ, ವೈದ್ಯಕೀಯ ಪ್ರತಿನಿಧಿಗಳ ಸಂಘ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬೃಹತ್ ವೈದ್ಯಕೀಯ ತಪಾಸಣಾ ಶಿಬಿರ ಗುರುವಾರ ಇಲ್ಲಿನ ಮಿಷನ್‍ಆಸ್ಪತ್ರೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಡಗಬೆಟ್ಟು ಸೋಸೈಟಿ ಜಿ.ಎಂಜಯಕರ ಶೆಟ್ಟಿ ಇಂದ್ರಾಳಿ, ಹಿರಿಯ ನಾಗರಿಕರು ತಮ್ಮ ನಿವೃತ್ತಿ ಜೀವನದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರಿಗೆ ಸಹಾಯಕವಾಗುವ ದೃಷ್ಟಿಯಿಂದ ಈ  ಶಿಬಿರ ಆಯೋಜನೆ ಮಾಡುತ್ತಿರುವುದು ಅಭಿನಂದನೀಯ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್, ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಶಿಬಿರ ಆಯೋಜನೆ ಮಾಡುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ  ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಸಿ.ಎಸ್ ರಾವ್, ಜಮಿಯ್ಯತುಲ್ ಫಲಾಹ್‍ ಅಧ್ಯಕ್ಷ ಲತೀಫ್‍ ಅಬ್ಡುಲ್ ರಶೀದ್, ವೈದ್ಯಕೀಯ ಪ್ರತಿನಿಧಿ ಸಂಘದ ರಾಘವೇಂದ್ರ ಪ್ರಭುಕರ್ವಾಲು ಮತ್ತಿತರರು ಉಪಸ್ಥಿತರಿದ್ದರು.

ರೋಹಿ ರತ್ನಾಕರ್ ನೀರೂಪಿಸಿದರು.ಡಾ. ಗಣೇಶ್‍ಕಾಮತ್,ಡಾ ಎಸ್,ಪಿ ಆನಂದ್ ಉಪಸ್ಥಿತರಿದ್ದರು.

ವೈದ್ಯರಾದ ಡಾ.ದೀಪಾ ರಾವ್, ಡಾ. ಆರ್.ಶ್ರೀಪತಿ,ಡಾ. ನಾಗೇಶ್,ಡಾ. ಪವಿತ್ರ, ಡಾ.ಲೀಲಾ  ತೋಮಸ್ ಮುಂತಾದವರಿದ್ದರು.

 

By suddi9

Leave a Reply

Your email address will not be published. Required fields are marked *