ಮಂಗಳೂರು: ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಆಯ್ಕೆಯಾದ ಯು.ಟಿ.ಖಾದರ್ ಅವರು ಜೂ. 8ರಂದು ಬೆಳಗ್ಗೆ 10ಕ್ಕೆ ಮಂಗಳೂರಿಗೆ ಆಗಮಿಸಲಿದ್ದಾರೆ.
ಬುಧವಾರ ಪ್ರಮಾಣವಚನ ಸ್ವೀಕರಿಸಿರುವ ಯು.ಟಿ.ಖಾದರ್ ಜೂನ್ 7 ಗುರುವಾರ ಕುಟುಂಬ ಸಮೇತ ಕೇರಳದ ಮಲಪ್ಪುರಂನಲ್ಲಿರುವ ತನ್ನ ಪುತ್ರಿ ಹವ್ವಾ ನಸೀಮಾ ಅವರ ವಿದ್ಯಾಸಂಸ್ಥೆಗೆ ತೆರಳಲಿದ್ದಾರೆ. ಬಳಿಕ ಬೆಂಗಳೂರಿಗೆ ಮರಳಲಿರುವ ಯು.ಟಿ.ಖಾದರ್ ಜೂ.7ರ ಬೆಳಗ್ಗೆ 10 ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ವಿಜಯೋತ್ಸವ ಅಭಿನಂದನೆಯ ವಾಹನ ಜಾಥಾದೊಂದಿಗೆ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸುವಂತೆ ಯುಟಿಕೆ ಮೀಡಿಯಾ ಕಮಿಟಿ ಪ್ರಕಟನೆ ತಿಳಿಸಿದೆ.

