ತೋಕೂರು: ಹಸಿರೇ ಉಸಿರು ಎಂಬಂತೆ ಭೂಮಿಯಲ್ಲಿ ಮನುಜ ಕುಲವು ಉಳಿಯಬೇಕೆಂದರೆ ಹಸಿರನ್ನು ಬೆಳೆಸಿ ಪರಿಸರವನ್ನು ಉಳಿಸುವಂತ ಮಹತ್ತರ ಕಾರ್ಯದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಬಲಿಷ್ಠ ಹಾಗೂ ಸ್ವಚ್ಛ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಪಾಲುದಾರರಾಗಬೇಕು ಎಂದು ಮುಲ್ಕಿ ರಾಮಕೃಷ್ಟ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ವೈ.ಎನ್.ಸಾಲಿಯಾನ್ ಅಭಿಪ್ರಾಯಪಟ್ಟಿದ್ದಾರೆ.
ತೋಕೂರು ಎನ್ ಎಸ್ಎಸ್ ಘಟಕ ಹಾಗೂ ಎನ್ಇಟಿ ರೋವರ್ಸ್ ಘಟಕ ಜಂಟಿಯಾಗಿ ಆಯೋಜಿಸಿರುವ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ವರ್ಷದ ವಿಶ್ವ ಪರಿಸರ ದಿನಾಚರಣೆಯ ಆತಿಥ್ಯವನ್ನು ಭಾರತ ದೇಶವು ವಹಿಸಿದ್ದು, ದೇಶದಲ್ಲಿ ಪಾಸ್ಟಿಕ್ ನಿರ್ಮೂಲನೆ ಮಾಡುವಲ್ಲಿ ವಿದ್ಯಾರ್ಥಿಗಳು ಮತು ಯುವಕರು ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಹರಿ ಎಚ್ , ಶಿವರಾಮ ದೇವಾಡಿಗ , ಉದಯ ಕುಮರ್ ಮತ್ತು ತರಬೇತಿ ಅಧಿಕಾರಿ ಲಕ್ಷ್ಮೀಕಾಂತ, ವಿದ್ಯಾರ್ಥಿಯಾದ ಆಶಿಕ್ ಅವರು ವಿಶ್ವ ಪರಿಸರ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು.
ಕಿರಿಯ ತರಬೇತಿ ಅಧಿಕಾರಿ ಸುರೇಶ್ ಎಸ್. ಸ್ವಾಗತಿಸಿದರು. ವಿಶ್ವನಾಥ್ ರಾವ್ ವಂದಿಸಿ, ಶಯನ ಬಿ ನಿರೂಪಿಸಿದರು.

