ಉಡುಪಿ: ಇಂದು ಪರಿಸರ ನಾಶವಾಗುತ್ತಿದ್ದು, ಇದನ್ನು ರಕ್ಷಿಸದಿದ್ದರೆ ಮುಂದಿನ ದಿನಗಳಲ್ಲಿ ಮಾನವನ ಬದುಕುವುದು ದುಸ್ತರವಾಗಬಹುದು. ಆದ್ದರಿಂದ ನಾವು ಕನಿಷ್ಠ ಒಂದು ಗಿಡವನ್ನು ಬೆಳೆಸುವ ಜಾವಾಬ್ಡಾರಿ ಬೆಳಸಿಕೊಳ್ಳಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿ ಮಿಷನ್ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಪರಿಸರ ದಿನಾಚರಣೆ ಮತ್ತು ಬೃಹತ್ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಸ್ಪತೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಮಾತನಾಡಿ, ಈ ಆಸ್ಪತ್ರೆಯನ್ನು ಪ್ಯಾಸ್ಟಿಕ್ ರಹಿತ ಆಸ್ಪತ್ರೆಯನ್ನಾಗಿ ಮಾಡಲಾಗುವುದು. ಗಿಡವನ್ನು ಉತ್ತಮವಾಗಿ ಬೆಳೆಸುವ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಬಡಗುಬೆಟ್ಟು ಕೋ.ಅ ಸೋಸೈಟಿಯ ಜಿ.ಎಂಜಯಕರ ಶೆಟ್ಟಿ ಇಂದ್ರಾಳಿ, ಹಿರಿಯ ವೈದ್ಯ ಡಾ. ಗಣೇಶ್ ಕಾಮತ್, ಆಡಳಿತಾಧಿಕಾರಿ ಡೋನಾಲ್ಡ್ ಅಂಚನ್, ಪ್ರಭಂಧಕ ರೋಲ್ಯಾಂಡ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಮೆನೆಜಸ್, ನರ್ಸಿಂಗ್ ಅಧೀಕ್ಷಕಿ ಅಲನ್ ಮಥಾಯಿಸ್, ವೈದ್ಯರಾದ ಡಾ. ಎಸ್ಪಿ ಆನಂದ್, ಡಾ. ಲೀಲಾ ಕ್ರಿಸ್ಟಿನ್, ಡಾ. ಪೆರಳಾಯ ಜೇಸಿ ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು, ಜೆಸಿಐ ಉಡುಪಿ ಸಿಟಿ ಅಧ್ಯಕ್ಷ ರಫೀಕ್ ಖಾನ್, ಉಡುಪಿ ಚೇಂಬರ್ ಆಫ್ ಕಾಮರ್ಸ್ ನ ಕೃಷ್ಣ ಕೊಡಂಚ, ಮಲಬಾರ್ ಗೋಲ್ಡ್ ನ ಹಫೀಸ್ ಮುಂತಾದವರಿದ್ದರು.
ಬಳಿಕ ಬೃಹತ್‍ಜಾಥಾಕಾರ್ಯಕ್ರಮ ನಗರದಲ್ಲಿ ನಡೆಯಿತು. ಜಾಥಾದಲ್ಲಿ ಮರಗಳಿಗೆ ಪರಿಸರದ ಕುರಿತು ಭಿತ್ತಿ ಪತ್ರಗಳನ್ನು ಹಾಕಲಾಯಿತು. ಅದೇರೀತಿ ವಿದ್ಯಾರ್ಥಿಗಳಿಗೆ ಗಿಡ ವಿತರಣೆ ನಡೆಸಲಾಯಿತು. ಆಸ್ಪತ್ರೆಯಲ್ಲಿ 50 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದಐರಿನ್ ಸಿಸ್ಟರ್ ರವರನ್ನು ಸನ್ಮಾನಿಸಲಾಯಿತು.

