ಬಂಟ್ವಾಳ: ಬಿಜೆಪಿ ಚೆನ್ನೈತ್ತೋಡಿ ಪಂಚಾಯತ್ ಸಮಿತಿಯ ವತಿಯಿಂದ ಅಜ್ಜಿಬೆಟ್ಟು ಬೂತ್ ಸ0ಖ್ಯೆ 16ರ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅಭಿನಂದನಾ ಸಮಾರಂಭ ನಡೆಯಿತು.
ಈ ವೇಳೆ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, ನನ್ನ ಗೆಲುವು ಕಾರ್ಯಕರ್ತರ ಗೆಲುವು. ಕಾರ್ಯಕರ್ತರ ಪರಿಶ್ರಮಕ್ಕೆ ಸಿಕ್ಕಫಲ. ಅಜ್ಜಿಬೆಟ್ಟು ಬೂತ್ ಬಿಜೆಪಿಗೆ ಶಕ್ತಿ ತುಂಬುವ ಬೂತ್ ಆಗಿದ್ದು, ಜನರ ನಿರೀಕ್ಷೆ ತಕ್ಕಂತೆ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಬಿಜೆಪಿಯ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ಸಂಗಬೆಟ್ಟು ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ, ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಎಸ್ಸಿ ಜಿಲ್ಲಾ ಅಧ್ಯಕ್ಷ ದಿನೇಶ್ ಅಮ್ಟೂರು, ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ. ಭಟ್, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಸುದರ್ಶನ್ ಬಜ, ಪುರುಷೋತ್ತಮ ಶೆಟ್ಟಿ, ಪ್ರಭಾಕರ ಪ್ರಭು, ಶ್ಯಾಂ ಪ್ರಸಾದ್ ಪೂಂಜ, ರಮಾನಾಥ ರಾಯಿ, ರಂಜಿತ್ ಮೈರ, ಗಣೇಶ್ ರೈ, ಬೇಬಿ ಗೌಡ, ಉಮೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ಯಶೋಧರ ಜೈನ್ ಸಂತೋಷ್, ಸಂಜೀವ ಶೆಟ್ಟಿ, ರವಿರಾಮ್, ಜಯ ಶೆಟ್ಟಿ, ಶೇಖರ ಮತ್ತಿತರರು ಉಪಸ್ಥಿತರಿದ್ದರು.


