ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಕೊನೂಗು ಪತ್ತೆ ಹಚ್ಚುವಲ್ಲಿ ಎಸ್ ಐಟಿ ತಂಡ ಯಶಸ್ವಿಯಾಗಿದೆ.
ವಿಜಯಪುರದ ಶೂಟರ್ ಮನೋಹರ್ ಯಡವೆ ಎಂದು ಗುರುತಿಸಲಾಗಿದೆ.
ಈ ಮನೋಹರ್ ಯಡವೆ ಅಲಿಯಾಸ್ ಮನೋಜ್ ಹಿಂದೂವಾದಿಯಾಗಿದ್ದ. ಒಂದು ವಾರ ಮುಂಚೆಯೇ ಬೆಂಗಳೂರಿಗೆ ಬಂದು ಗೌರಿ ಲಂಕೇಶ್ ಹತ್ಯೆಗೆ ಮನೋಹರ್ ತಂತ್ರ ರೂಪಿಸಿದ್ದು, ತನ್ನ ತಂಡದ ಜತೆ ಗೌರಿ ಹತ್ಯೆಗೆ ಸಂಚು ರೂಪಿಸಿದ್ದಲ್ಲದೆ, ಈತ ಗೋವಾದಲ್ಲಿ ಪ್ರತೀ ತಿಂಗಳು ಹಿಂದೂ ವಿರೋಧಿಗಳ ವಿರುದ್ಧ ತಂತ್ರ ರೂಪಿಸಲು ಗೌಪ್ಯ ಸಭೆ ನಡೆಸುತ್ತಿದ್ದ ಎಂದು ಎಸ್ಐಟಿ ಬಹಿರಂಗ ಪಡಿಸಿದೆ.

