ಉಜಿರೆ: ಖ್ಯಾತ ಜೋತಿಷಿ ಹಾಗೂ ಉಜಿರೆಯ ಎಸ್ ಡಿಎಂ ಕಾಲೇಜಿನ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎಸ್. ಸುಬ್ರಹ್ಮಣ್ಯ ಐತಾಳ್ (ಎಸ್.ಎಸ್. ಐತಾಳ್) (೭೫) ಸೋಮವಾರ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೂಲತಃ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ನಿವಾಸಿಯಾದ ಅವರು ಉಜಿರೆಯ ಎಸ್ ಡಿಎಂ ಕಾಲೇಜನಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಮೂವತ್ತನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಉತ್ತಮ ವಾಗ್ಮಿ, ವ್ಯವಹಾರ ಕುಶಲರು ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದ ಅವರು ಜೋತಿಷಿಯಾಗಿಯೂ ಚಿರಪರಿಚಿತರು.
ಪ್ರೊ.ಐತಾಳರ ಅಂತ್ಯ ಸಂಸ್ಕಾರವನ್ನು ನಿನ್ನೆ ಸಂಜೆ ಉಜಿರೆಯಲ್ಲಿ ನಡೆಸಲಾಯಿತು.
