ಉಡುಪಿ: ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದಂತೆ 24 ಗಂಟೆಗಳಲ್ಲಿ ಸಾಲ ಮನ್ನಾ ಮಾಡದಿದ್ದರೆ ಸೋಮವಾರ ಬಂದ್ ನಡೆಸಲಾಗುವುದೆಂದು ಬಿಜೆಪಿ ಘೋಷಿಸಿತ್ತು.ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸುವಂತೆಯೂ ಕೋರಿದ್ದರು. ಆದರೆ ಇದೀಗ ಬಿಜೆಪಿಯ ಪ್ರಭಾವ ಮತ್ತು ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರೇ ಇರುವ ಉಡುಪಿಯಲ್ಲಿ ಬಂದ್ ಗೆ ಶೂನ್ಯ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಎಂದಿನಂತೆ ಬಸ್ ಸಂಚಾರ, ಅಂಗಡಿ ಮುಗ್ಗಟ್ಟು ಗಳು ತೆರೆದಿದ್ದು ಬಿಜೆಪಿಗೆ ಭಾರಿ ಮುಖ ಭಂಗವಾಗಿದೆ.

