file70bqre4m42q12i1eukdz

ಸಿದ್ದಾಪುರ: ದೇಶದ ಎಲ್ಲ ರಾಜ್ಯಗಳಲ್ಲಿಯೂ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬರಬೇಕು ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಆಗ್ರಹಿಸಿದ್ದಾರೆ.

ತಾಲ್ಲೂಕಿನ ಭಾನ್ಕುಳಿ ಮಠದ ಆವರಣದಲ್ಲಿ ರವಿವಾರ ಸಂಜೆ ಆಯೋಜಿಸಿದ್ದ ‘ಗೋ ಸ್ವರ್ಗ‘ (ಗೋ ಶಾಲೆ) ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಗೋವನ್ನು ಗೌರವಿಸುವ ಮನೋಭಾವ ನಮ್ಮಲ್ಲಿ ಬೆಳೆಯಬೇಕು. ತಾಯಿ, ತಂದೆ, ಆಚಾರ್ಯ ಹಾಗೂ ಅತಿಥಿಯನ್ನು ದೇವರು ಎಂದು ಪರಿಭಾವಿಸುವ ಉಪನಿಷತ್ ವಾಕ್ಯದ ರೀತಿಯಲ್ಲಿ ಗೋವನ್ನೂ ದೇವರು ಎಂದು ಭಾವಿಸಬೇಕು ಎಂದರು.

 

By suddi9

Leave a Reply

Your email address will not be published. Required fields are marked *