whatsapp-fake-new-can-lead-to-prison

ಪುತ್ತೂರು: ಸಮೀಪದ ವಿಟ್ಲದಲ್ಲಿ ಎರಡು ಕೋಮಿನ ನಡುವೆ ನಡೆದ ಸಂಘರ್ಷಕ್ಕೆ ಸಂಬಂಧಿಸಿ ಕೋಮು ಭಾವನೆ ಕೆರಳಿಸುವ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪಾರ್ವರ್ಡ್ ಮಾಡಿದ್ದಾರೆ ಎಂಬ ಅಪಾದನೆ ಮೇರೆಗೆ ಓರ್ವನನ್ನು ಸುಬ್ರಹ್ಮಣ್ಯದಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಪಂಜ ಸಮೀಪದ ಪಂಬೆತ್ತಾಡಿ ನಿವಾಸಿ ದಯಾನಂದ ಎಂದು ಗುರುತಿಸಲಾಗಿದೆ.

ಸುಬ್ರಹ್ಮಣ್ಯದಲ್ಲಿ ಅಂಗಡಿಯೊಂದರಲ್ಲಿ ಮಾರಾಟ ವಿಭಾಗದಲ್ಲಿ ಈತ ಕೆಲಸ ನಿರ್ವಹಿಸುತ್ತಿದ್ದ ಈತ ಕೋಮು ಭಾವನೆ ಕೆರಳಿಸುವ ಸಂದೇಶ ರವಾನಿಸಿದ ಆಪಾದನೆ ಇದ್ದು, ಈ ಹಿನ್ನೆಲೆ ಪೊಲೀಸರು ದಯಾನಂದ್ ನನ್ನು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ಮುಂದುವರೆಸಿದ್ದಾರೆ.

By suddi9

Leave a Reply

Your email address will not be published. Required fields are marked *