ಸುದ್ದಿ9ಮೂಡಬಿದ್ರೆ;ಅಕ್ರಮ ಕಟ್ಟಡ ನಿಮರ್ಾಣಕ್ಕೆ ಪರವಾನಿಗೆ ನೀಡಿ ವಿವಾದಕ್ಕೆ ಕಾರಣವಾದ ಮೂಡಬಿದ್ರೆ ಪುರಸಭೆ ಮತ್ತೊಮ್ಮೆ ಅಕ್ರಮ ಕೋಳಿ ಮಾರಾಟವನ್ನು ಬೆಂಬಲಿಸುತ್ತಿದೆ ಎನ್ನುವ ಆರೋಪ ಕೇಳಿ ಬಂದಿದ್ದು,ಇದಕ್ಕೆ ಪೂರಕ ಎಂಬಂತೆ ಕೋಳಿ ಅಂಗಡಿ ಏಲಂ ದಾರನಿಗೆ ನೀಡಿರುವ ಪಾವತಿ ರಶೀಧಿಯಲ್ಲಿ ಅಕ್ಷರ ಮತ್ತು ಸಂಖ್ಯೆಯಲ್ಲಿ ವಿಬಿನ್ನ ಮೊತ್ತವನ್ನು ನಮೂದಿಸಿರುವುದು ಬೆಳಕಿಗೆ ಬಂದಿದೆ.
ಉಪ್ಪಿನಂಗಡಿ ನಿವಾಸಿ ನಸೀಬ್ ಎಂಬವರು ಈ ಬಾರಿಯ ಕೋಳಿ ಅಂಗಡಿಯ ಬಹಿರಂಗ ಹರಾಜಿನಲ್ಲಿ ಮಾರುಕಟ್ಟೆಯಲ್ಲಿರುವ ಎರಡೂ ಕೋಳಿ ಅಂಗಡಿಗಳನ್ನು ಒಟ್ಟು ಇಪ್ಪತ್ತು ಲಕ್ಷದ ಹದಿನಾರು ಸಾವಿರ ರೂಪಾಯಿಗಳಿಗೆ ಪುರಸಭೆಯಿಂದ ಪಡೆದುಕೊಂಡಿದ್ದರು.ಹೀಗಾಗಿ ಅಂಗಡಿಯೊಂದರ ಹರಾಜು ಮೊತ್ತ 613400 ರೂಪಾಯಿಗಳನ್ನು ಪಾವತಿಸಿದ ಬಗ್ಗೆ ಪುರಸಭೆಯ ಏಕ್ಸಿಸ್ ಬ್ಯಾಂಕ್ ನಸೀಬ್ಗೆ ನೀಡಿದ ಪಾವತಿ ರಶೀದಿಯಲ್ಲಿ ಸಂಖ್ಯೆಯಲ್ಲಿ ಮೊತ್ತ ಸರಿಯಾಗಿದ್ದು, ಅಕ್ಷರದಲ್ಲಿ ನಮೂದಿಸಿದ ಮೊತ್ತದಲ್ಲಿ ಆರು ಲಕ್ಷವನ್ನು ಬಿಟ್ಟು ಕೇವಲ ಹದಿಮೂರು ಸಾವಿರದ ನಾಲ್ಕು ನೂರು ರೂಪಾಯಿ ಎಂದು ಬರೆಯಲಾಗಿದೆ.ಪುರಸಭೆಯಲ್ಲಾದ ಲಕ್ಷದ ನಿರ್ಲಕ್ಷ್ಯ ಉದ್ದೇಶ ಪೂರ್ವಕವೇ ಅಥವ ಬೇಜವಾಬ್ದಾರಿಯೇ ಎನ್ನುವುದು ತನಿಖೆಯಿಂದಷ್ಟೇ ಹೊರ ಬರಬೇಕಿದೆ.
ನಸೀಬ್ ಸದ್ಯ 2016000 ಪಾವತಿಸಿ ಇಲ್ಲಿನ ಮಾರುಕಟ್ಟೆಯ ಎರಡು ಕೋಳಿ ಅಂಗಡಿಗಳಲ್ಲಿ ವ್ಯಾಪಾರ ನಡೆಸುತ್ತಿದ್ದು,ಪರವಾನಿಗೆ ಪಡೆಯದ ಅಕ್ರಮ ಕೋಳಿ ವ್ಯಾಪಾರಿಗಳಿಂದ ನಷ್ಟ ಅನುಭವಿಸುತ್ತಿದ್ದಾರೆ ಎಂದು ರಾಜ್ಯ ಹೈಕೋಟರ್್ನಲ್ಲಿ ದಾವೆ ಹೂಡಿದ್ದಾರೆ.ಕಳೆದ ವರ್ಷ ಜಿಲ್ಲಾಧಿಕಾರಿಗಳೂ ಅಕ್ರಮ ಕೋಳಿ ಮಾರಾಟದ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಂಗಳೂರು ಪೋಲಿಸ್ ಕಮಿಷನರ್ ಮತ್ತು ಪುರಸಭೆ ಮುಖ್ಯಾಧಿಕಾರಿಯವರಿಗೆ ಪತ್ರ ಬರೆದು ಆದೇಶಿಸಿದ್ದರು.



tmc bill

By suddi9

Leave a Reply

Your email address will not be published. Required fields are marked *