ಸಾಂಸ್ಕೃತಿಕ ಮೌಲ್ಯಗಳ ರಕ್ಷಣೆಯಲ್ಲಿ ವಿದ್ಯಾಥರ್ಿಗಳ ಪಾತ್ರ ಮುಖ್ಯ.
ಸುಂಕದಕಟ್ಟೆ: *ಸಮೃದ್ಧಿ-2014 ವಿ.ವಿ. ಮಟ್ಟದ ಸಾಂಸ್ಕೃತಿಕ ಸ್ಪಧರ್ೆ
ಸುದ್ದಿ 9 ಬಜ್ಪೆ
ನಾಡಿನ ಸಾಂಸ್ಕೃತಿಕ, ಜನಪದ ಮೌಲ್ಯಗಳ ರಕ್ಷಣೆಯಲ್ಲಿ ವಿದ್ಯಾಥರ್ಿಗಳ ಪಾತ್ರ ಅತ್ಯಂತ ಮಹತ್ವದ್ದು. ಸಾಧನೆಗೆ ಪರಿಶ್ರಮ ಹಾಗೂ ಶ್ರದ್ಧೆ ಮುಖ್ಯ. ಭವಿಷ್ಯದ ಬದುಕಿಗೆ ನಿಜ ರೂಪ ರೂಪಿಸುವ ಈ ಹಂತದಲ್ಲಿ ನಮ್ಮ ವ್ಯಕ್ತ್ತಿತ್ವಕ್ಕೆ ಅಂದದ ಚೌಕಟ್ಟು ಸಿಕ್ಕಾಗ ಮಾನವೀಯ ಮೌಲ್ಯಗಳು ಕೂಡಾ ಮೈಗೂಡುತ್ತದೆ.* ಎಂದು ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಯ್ಯೊಟ್ಟು ಸದಾಶಿವ ಸಾಲ್ಯಾನ್ ಅವರು ಹೇಳಿದರು.
ಅವರು ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಥಮ ದಜರ್ೆ ಕಾಲೇಜಿನ ವಿದ್ಯಾಥರ್ಿ ಸಂಘದ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ವೈವಿಧ್ಯ ಸ್ಪಧರ್ೆ *ಸಮೃದ್ಧಿ-2014*ನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭ ಕನರ್ಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿನ್ನೆಲೆಯಲ್ಲಿ ಕಾಲೇಜಿನ ವತಿಯಿಂದ *ಪಯ್ಯೊಟ್ಟು ಸದಾಶಿವ ಸಾಲ್ಯಾನ್* ಅವರನ್ನು ಸನ್ಮಾನಿಸಲಾಯಿತು.
ಸಮೃದ್ಧಿ-2014* ರಲ್ಲಿ ಮಂಗಳೂರು ವಿ.ವಿ ವ್ಯಾಪ್ತಿ 12ಕಾಲೇಜುಗಳು ಪಾಲ್ಗೊಂಡಿವೆ.
ಉದ್ಯಮಿ ಸುಕುಮಾರ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ಧರು. ಜಿಲ್ಲಾ ಪಂಚಾಯಿತಿ ಸದಸ್ಯೆ ಯಶವಂತಿ ಆಳ್ವ, ತಾ.ಪಂ.ಸದಸ್ಯೆ ಸೆಲಿನ್ ಫೆನರ್ಾಂಡಿಸ್, ಕಂದಾವರ ಗ್ರಾ.ಪಂ ಅಧ್ಯಕ್ಷೆ ವಿಜಯಾ ಗೋಪಾಲ್ ಸುವರ್ಣ, ಶಿಕ್ಷಕ ರಕ್ಷಕ ಸಂಘದ ವಸಂತಿ, ಹಳೆ ವಿದ್ಯಾಥರ್ಿ ದಿನೇಶ್, ಕಾಲೇಜಿನ ಪ್ರಿನ್ಸಿಪಾಲ್ ಲತಾ ಆರ್. ಪದವಿ ಪೂರ್ವ ವಿಭಾಗದ ಪ್ರಿನ್ಸಿಪಾಲ್ ಅಹಲ್ಯಾ ಕೆ, ವಿದ್ಯಾಥರ್ಿ ಸಂಘದ ಅಧ್ಯಕ್ಷ ರಾಜೇಶ್ ಕೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಮ ಭಟ್, ಹಳೆ ವಿದ್ಯಾಥರ್ಿ ಸಂಘದ ಅಧ್ಯಕ್ಷ ದಿಲೀಪ್ ಕುಮಾರ್, ಸಮೃದ್ಧಿ-2014* ಸಂಯೋಜಕರಾದ ಪುಷ್ಪಲತಾ, ಬಬಿತಾ, ದನಲಕ್ಷ್ಮಿ, ಅವರುಗಳು ವೇದಿಕೆಯಲ್ಲಿದ್ದರು.
ಉಪನ್ಯಾಸಕಿ ಪುಷ್ಪಲತಾ ಸ್ವಾಗತಿಸಿದರು, ರಾಜೇಶ್ ವಂದಿಸಿದರು. ದಿವ್ಯಾ ಕಾರ್ಯಕ್ರಮ ನಿರೂಪಿಸಿದರು.



