ಬಂಟ್ವಾಳ: ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಬಂಟ್ವಾಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಫರಂಗಿಪೇಟೆಯ ಮಾರಿಪಳ್ಳ ನಿವಾಸಿಗಳಾದ ಹಸನಬ್ಬ ಮತ್ತು ಮನ್ಸೂರ್ ಎಂದು ಗುರುತಿಸಲಾಗಿದೆ.
ಬಂಟ್ವಾಳದ ಪರಂಗಿಪೇಟೆಯ ಅಮ್ಮೆಮಾರ್ ಎಂಬಲ್ಲಿ ಈ ಅಕ್ರಮ ಕಸಾಯಿಖಾನೆ ಕಾರ್ಯಾಚರಿಸುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಬಂಟ್ವಾಳ ಪೊಲೀಸರು ಕಾರ್ಯಾಚರಣೆ ನಡೆಸಿ 11 ಹಸುವಿನ ಚರ್ಮ, ಒಂದು ಕರು ಸೇರಿದಂತೆ, ನಾಲ್ಕು ದನಗಳ ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ಐಪಿಎಸ್ ಅಕ್ಷಯ್ ಎಂ. ಹಾಕೆ, ಪ್ರಕಾಶ್, ಬಂಟ್ವಾಳ ಠಾಣಾ ಎಸೈ ಪ್ರಸನ್ನ, ವಿಶಾಲಕ್ಷ್ಮೀ, ಬಶೀರ್, ನಝೀರ್, ಸುರೇಶ್, ಜನಾರ್ದನ, ನಾಗನಾಥ್ ಭಾಗವಹಿಸಿದ್ದರು.

