ಇದು ಹೋರಿ-ಶ್ವಾನದ ನೈಜ ಪ್ರೀತಿ
ಸುದ್ದಿ9 ಮಂಗಳೂರು: ಪ್ರೀತಿಯೊಂದಿದ್ದರೆ, ಇಡೀ ಜಗತ್ತನ್ನು ಜಯಿಸಬಲ್ಲೆ, ಭವಬಂಧನ ಕಳಚಿದರೂ ನಮ್ಮ ಪ್ರೇಮ ಶಾಶ್ವತ…..
ಇಂಥಹಾ ಸಾಲುಗಳನ್ನು ನೀವು ನೀವು ಓದಿರುತ್ತೀರಿ. ಸ್ನೇಹದಲ್ಲಿಡಗಿದ ಪ್ರೀತಿಯ ಅರ್ಥವನ್ನು ತಿಳಿಸಲೆಂದು ಮಂಗಳೂರಿನ ಅತ್ತಾವರದಲ್ಲಿ ನಡೆದ ನೈಜ ಕಥೆಯನ್ನು ಕೇಳಿ ನೀವು ಕಣ್ಣೀರಿಡದಿದ್ದರೆ ಇಲ್ಲಿ ಕೇಳಿ.
ಸುಮಾರು ಹತ್ತುವರ್ಷಗಳಿಂದ ಆ ಶ್ವಾನ ಹಾಗೂ ಹೋರಿ ಬಿಟ್ಟಿಲರಾದಷ್ಟು ಸ್ನೇಹಿತರಾಗಿಬಿಟ್ಟಿದ್ದವು. ಅಧಮ್ಯ ಸ್ನೇಹದ ನಡುವೆ ಸ್ನೇಹದ ಮಧ್ಯೆ ಬಂಧಿಯಾಗಿದ್ದ ಆ ವಿಭಿನ್ನ ಜೋಡಿ, ಬಂದು ಹೋಗುತ್ತಿದುದು ಎಲ್ಲವೋ ಒಟ್ಟಿಗೆ.

dog
ವನವಾಸದ ಸಂದರ್ಭ ಶ್ರೀರಾಮನನ್ನು ತಮ್ಮ ಲಕ್ಷ್ಮಣ ಕಾದಂತೆ ಆ ಶ್ವಾನ ಹೋರಿಯನ್ನು ಕಣ್ಣರೆಪ್ಪೆಯಂತೆ ಕಾಪಾಡುತ್ತಾ ಬರುತ್ತಿತ್ತು. ಅಪ್ಪಟ ಸಾಧು ಪ್ರಾಣಿಯಾಗಿದ್ದ ಆ ಹೋರಿಗೆ ಶ್ವಾನ ಎಂದರೆ ಜೀವಕ್ಕೆ ಜೀವ, ಪ್ರಾಣಕ್ಕೆ ಪ್ರಾಣ .
ಆದರೆ ವೆರಡರ ಆತ್ಮೀಯತೆಯನ್ನು ಕಂಡು ಕ್ರೂರ ವಿಧಿಗೆ ಸಹಿಸಲಾಗಲಿಲ್ಲ. ಅದೇನಾಯ್ತೋ ಏನೋ.
ಅತ್ತವಾರದ ಮಟಮಟ ಮಧ್ಯಾಹ್ನದ ವೇಳೆ ಹೋರಿ ತನ್ನ ಪ್ರಾಣವನ್ನು ಬಿಟ್ಟು ಅನಂತದೆಡೆಗೆ ಲೀನವಾಯ್ತು.
ಸಹೋರಿಯ ಪ್ರಾಣ ಹೋದದನ್ನು ಕಂಡು ಶ್ವಾನ ದುಃಖದಲ್ಲಿ ತೇಲಾಡಿತು. ಮೂಖವೇದನೆಯನ್ನು ಅನುಭವಿಸಿದ ಶ್ವಾನದ ದುಃಖಕ್ಕೆ ಸ್ವಾಂತ್ವಾನ ಹೇಳಬೇಕಾಗಿದ್ದ ಹೋರಿ ಶವವಾಗಿತ್ತು.
ಇಂಥಾ ಮನಕಲಕುವ ದೃಶ್ಯವನ್ನು ನೋಡಲು ಅಲ್ಲಿ ಸುಮಾರು 500 ಮಂದಿ ನೆರೆದಿದ್ದರು. ಜನರ ಗದ್ದಲವನ್ನು ಕಂಡು ಶ್ವಾನ ಮೆಲ್ಲ ದಾರಿ ಮಾಡಿಕೊಟ್ಟಿತ್ತು.
ಹೋರಿಯ ಪಾಥರ್ೀವ ಶರೀರವನ್ನು ಎತ್ತಿ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯ್ತು.
ಆದರೆ ಶ್ವಾನ ಮಾತ್ರ ಹೋರಿಯ ಸಮಾಧಿ ಬಳಿಯಲ್ಲಿ ಮಲಗಿದ್ದು, ಮೌನವಾಗಿ ರೋಧಿಸುತ್ತಿದೆ.

By Suddi9

Leave a Reply

Your email address will not be published. Required fields are marked *