POOJARI

ಮಂಗಳೂರು: ಮೋದಿ, ಅಮಿಶ್ ಶಾ ಅವರಿಂದ  ಕಾಂಗ್ರೆಸ್ ಮುಕ್ತ ಮಾಡುವುದು ಅಸಾಧ್ಯ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಇದೇ ಮೊದಲ ಬಾರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಕಾಂಗ್ರೆಸ್‌ನಿಂದ ಅಪಮಾನ ಆಗಿಲ್ಲ. ಹರಿಕೃಷ್ಣ ಬಂಟ್ವಾಳ ಹೇಳಿಕೆ ಸತ್ಯಕ್ಕೆ ದೂರವಾದದ್ದು, ಜನರು ಹರಿಕೃಷ್ಣರ ಮಾತು ನಂಬುವಷ್ಟು ದಡ್ಡರಲ್ಲ. ಹರಿಕೃಷ್ಣ ಯಾರು, ಪೂಜಾರಿ ಯಾರು ಎಂದು ಜನರಿಗೆ ಗೊತ್ತಿದೆ ಎಂದು ಕಿಡಿಕಾರಿದರು.

ಆಸ್ಕರ್ ಫರ್ನಾಂಡೀಸ್ ಒಳ್ಳೆಯವರು. ಅವರ ಎರಡು ಕಿಡ್ನಿ ವಿಫಲವಾಗಿದೆ. ಅವರಿಗೆ ನಾನು ಪ್ರತಿದಿನ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಲೋಕಾಯುಕ್ತ ಜಗನ್ನಾಥ ಶೆಟ್ಟಿ ಅವರಿಗೂ ನಾನು ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು.

ಸಿದ್ದರಾಮಯ್ಯ ಬಗ್ಗೆ ಖಡಕ್ ಮಾತಾಡಿದ್ದು ಹೌದು. ಸರ್ಕಾರಕ್ಕೆ ನಾನು ಸಲಹೆ ಕೊಟ್ಟಿದ್ದೇನೆ. ಒಂದು ವೇಳೆ, ನನ್ನ ಸಲಹೆ ಪಾಲಿಸದಿದ್ದರೆ ಅವರೂ ಹೋಗುತ್ತಾರೆ. ಯಾರಿಗೂ ದುರಹಂಕಾರ ಇರಬಾರದು. ಇದೇ ರೀತಿ  ಮುಂದುವರಿದರೆ ಸೋಲುತ್ತಾರೆ. ಸಿಎಂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ. ಸಿದ್ದರಾಮಯ್ಯ ಜನರ ಕೆಲಸ ನಿಶ್ಶಂಶಯವಾಗಿ ಮಾಡಿದ್ದಾರೆ. ಮೋದಿ, ಅಮಿಶ್ ಶಾ ಅವರಿಂದ  ಕಾಂಗ್ರೆಸ್ ಮುಕ್ತ ಮಾಡುವುದು ಅಸಾಧ್ಯ ಎಂದರು.

By suddi9

Leave a Reply

Your email address will not be published. Required fields are marked *