ಕೈಕಂಬ: ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ಕುಮಾರ್ ಶೆಟ್ಟಿ ಮೇ 8ರಂದು ಗುರುಪುರದ ಶ್ರೀ ವೈದ್ಯನಾಥ ದೈವಸ್ಥಾನಕ್ಕೆ(ದೈವಸ್ಥಾನ ಜೀರ್ಣೋದ್ಧಾರ ಹಂತದಲ್ಲಿದೆ) ಭೇಟಿ ನೀಡಿ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಗುರುಪುರ ಶ್ರೀ ವಜ್ರದೇಹಿ ಮಠಕ್ಕೆ ಭೇಟಿ ನೀಡಿ, ರಾಜಶೇಖರಾನಂದ ಸ್ವಾಮಿಯಿಂದ ಆರ್ಶಿರ್ವಾದ ಪಡೆದುಕೊಂಡು, ಗುರುಪುರ ಪೇಟೆಯಲ್ಲಿ ಬಿರುಸಿನ ಪ್ರಚಾರ ನಡೆಸಿದರು.
