ಕೈಕಂಬ : ಕೈಕಂಬದ ಅವರ್ ಲೇಡಿ ಆಫ್ ಪೋಂಪೈ ಇಂಗ್ಲಿಷ್ ಮಾಧ್ಯಮ ಹೈಸ್ಕೂಲಿಗೆ ಈ ಬಾರಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 85ಕ್ಕೂ ಹೆಚ್ಚು ಫಲಿತಾಂಶ ಬಂದಿದೆ.

ನಿಷ್ಕರ್ಷ್ ಚೌಟ 600 ಅಂಕಗಳೊಂದಿಗೆ(ಶೇ 96) ಶಾಲೆಗೆ ಪ್ರಥಮ ಬಂದಿದ್ದಾನೆ. ಉಳಿದಂತೆ ವಫಾ ಖತೀಜಾ(582), ಜಿ ಪ್ರಜ್ವಲ್ ಕಾಮತ್ ಗುರುಪುರ(579) ಆಯೇಶಾ ಶಿಫಾನಾ(573), ರಚಿತ ಎಂ ಆಆರ್(559), ಫಾತಿಮಾ ಸಮ್ರ(550), ಪ್ರೇರಣಾ(548), ಆಯೇಶಾ ಸುಸೈನಾ(545), ಅಭಿಷೇಕ್(543), ಚೈತನ್ಯಾ(535) ಅಂಕಗಳೊಂದಿಗೆ ಅಗ್ರ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

01

ಶಾಲೆಗೆ ಒಟ್ಟು ಶೇ 100 ಫಲಿತಾಂಶ ಬಂದಿದೆ. ಶಾಲೆಯಿಂದ ಒಟ್ಟು 40 ಮಂದಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದು, ನಾಲ್ಕು ಮಂದಿ ಅಗ್ರ ಶ್ರೇಣಿಯಲ್ಲಿ, ಪ್ರಥಮ ದರ್ಜೆಯಲ್ಲಿ 30 ಮಂದಿ, ದ್ವಿತೀಯ ದರ್ಜೆಯಲ್ಲಿ ಆರು ಮಂದಿ ಪಾಸಾಗಿದ್ದಾರೆಂದು ಶಾಲೆಯ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *