IMG-20180503-WA0020-696x348

ಕಾಪು: ಇಲ್ಲಿನ ಉಚ್ಚಿಲ ಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ವಿನಯಕುಮಾರ್ ಸೊರಕೆ ಪರ ಬಿರುಸಿನ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ , ಸೊರಕೆಯವರು ಜಾತ್ಯಾತೀತವಾಗಿ ಎಲ್ಲ ಸಮುದಾಯವನ್ನು ಸಮಾನವಾಗಿ ಕಂಡಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಪರ ಕಾರ್ಯಗಳನ್ನು ಮಾಡಿದ್ದು, ಕಾಪು ಕ್ಷೇತ್ರದಲ್ಲಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನ ಗುರುತಿಸಿಕೊಂಡು ಇನ್ನಷ್ಟು ಅಭಿವೃದ್ಧಿಗೆ ಅವಕಾಶ ಮಾಡಿಕೊಡಲಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ, ಕಾಪು ಪುರ ಸಭಾ ಸದಸ್ಯ ಇಮ್ರಾನ್ ಮಜೂರ್,ಅಲ್ಪಸಂಖ್ಯಾತರ ಝೊನಲ್ ಕಾರ್ಡಿನೇಟರ್ ರಫೀಕ್ ದೀವ್, ಜಿಲ್ಲಾ ಸಂಯೋಜಕ ಸಿರಾಜ್ ಎನ್.ಎಚ್.,ತಾ.ಪಂ‌ ಸದಸ್ಯ ಶೇಖಬ್ಬ, ಇಂಟೆಕ್ ಜಿಲ್ಲಾ ಕಾರ್ಯದರ್ಶಿ ಸಾಧಿಕ್ ಎನ್.ಎಚ್. ಗ್ರಾ.ಪಂ ಸದಸ್ಯ ರಝಾಕ್ ಬಗ್ಗತೋಟ,ಫಝಲ್ ಉಚ್ಚಿಲ ,ಗಣೇಶ ಆಚಾರ್ಯ ಮತ್ತಿತರರು ಸಾಥ್ ನೀಡಿದ್ದರು.

By suddi9

Leave a Reply

Your email address will not be published. Required fields are marked *